Today petrol, diesel rate | ಶಿವಮೊಗ್ಗದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ನಿರಂತರ ಏರಿಕೆ ಆಗುತಿದ್ದ ಪೆಟ್ರೋಲ್, ಡೀಸೆಲ್ ಬೆಲೆಗೆ ಗುರುವಾರ ಬ್ರೇಕ್ ಬಿದ್ದಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಪರಿಣಾಮ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗಿದೆ.
ಕೇಂದ್ರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ₹5 ಹಾಗೂ ಪೆಟ್ರೋಲ್ ಮೇಲಿನ ಸುಂಕವನ್ನು ₹5 ಇಳಿಕೆ ಮಾಡಿದ್ದು, ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡಿದೆ.

READ | ನಿತ್ಯವೂ ಬಳಸುವ `ಮಾಫಿಯಾ’ ಪದದ ಹಿಂದಿದೆ ರೋಚಕ ಕಥೆ, ತಿಳಿದುಕೊಳ್ಳಲು ಇದನ್ನು ಓದಿ

ಶತಕದೊಳಗೆ ಡೀಸೆಲ್ ದರ
ಡೀಸೆಲ್ ಬೆಲೆಯು ಲೀಟರಿಗೆ ₹105.86 ತಲುಪಿತ್ತು. ಇದು ನೇರವಾಗಿ ಗೂಡ್ಸ್ ವಾಹನಗಳ ಮೇಲೆ ಪರಿಣಾಮ ಬೀರಿದೆ. ಸರಕು ಸಾಗಣೆ ವೆಚ್ಚ ಗಗನಕ್ಕೇರಿತ್ತು. ಈಗ ದರ ಇಳಿಕೆ ಆಗಿರುವುದರಿಂದ ಸಾಗಣೆ ವೆಚ್ಚವೂ ಕಡಿಮೆ ಆಗಲಿದೆ. ಪೆಟ್ರೋಲ್ ದರ ಅಕ್ಟೋಬರ್ ತಿಂಗಳಿನಲ್ಲಿ ನಿರೀಕ್ಷೆ ಮೀರಿ ಹೆಚ್ಚಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಸುಂಕ ಇಳಿಕೆ ಮಾಡಿರುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ.
ಅಕ್ಟೋಬರ್ 3ರಂದು ₹106.75ರಷ್ಟಿದ್ದ ಪೆಟ್ರೋಲ್ ಬೆಲೆಯು ನವೆಂಬರ್ 3ಕ್ಕೆ 115.58ಗೆ ತಲುಪಿತ್ತು. ಒಂದೇ‌ ತಿಂಗಳಲ್ಲಿ‌ ಶೇ.6.17ರಷ್ಟು ಪೆಟ್ರೋಲ್ ದರ ಅಕ್ಟೋಬರ್ ನಲ್ಲಿ ಏರಿಕೆ ಕಂಡಿತ್ತು. ಆದರೆ, ಸರ್ಕಾರ ಅಬಕಾರಿ ಸುಂಕ ಇಳಿಸಿದ್ದೇ ನವೆಂಬರ್ 4ಕ್ಕೆ ಶೇ.4.5ರಷ್ಟು ಬೆಲೆ ಇಳಿಕೆಯಾಗಿದೆ.
ಶಿವಮೊಗ್ಗದಲ್ಲಿ ಇಂಧನ ಬೆಲೆ
ಡೀಸೆಲ್(Diesel) ಬೆಲೆಯು ಪ್ರತಿ ಲೀಟರ್ ಗೆ ₹93.41 ಹಾಗೂ ಪೆಟ್ರೋಲ್ (Petrol) ₹109.24 ನಿಗದಿಯಾಗಿದೆ. ಪವರ್ ಪೆಟ್ರೋಲ್ (Power Petrol) ₹113.13, ಟರ್ಬೋ ಜೆಟ್ (Turbojet) ₹96.74 ಬೆಲೆ ಇದೆ. ಒಂದೇ ದಿನ ಪ್ರತಿ ಲೀಟರ್ ಪೆಟ್ರೋಲೆ ಮೇಲೆ ₹6.30 ಹಾಗೂ ಡೀಸೆಲ್ ₹12.69 ಇಳಿಕೆಯಾಗಿದೆ.

https://www.suddikanaja.com/2021/11/01/today-gold-rate-in-karnataka/

error: Content is protected !!