ರಿಸೆಪ್ಷನ್‍ನಲ್ಲಿ ಊಟ ಮಾಡಿದ 100ಕ್ಕೂ ಹೆಚ್ಚು ಜನ ಅಸ್ವಸ್ಥ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿವಮೊಗ್ಗ: ರಿಸೆಪ್ಷನ್ ನಲ್ಲಿ ಊಟ ಮಾಡಿದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಹರಮಘಟ್ಟ ಬಳಿಯ ಆಲದಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಜೋಡಿ ಮದುವೆಯ ಹಿನ್ನೆಲೆ ಗುರುವಾರ ರಾತ್ರಿ ಗ್ರಾಮಸ್ಥರು ಊಟ ಮಾಡಿದ್ದಾರೆ. ಮಾರನೇ ದಿನ ಮಧ್ಯಾಹ್ನದ ಹೊತ್ತಿಗೆ ಆರೋಗ್ಯ ಬಿಗಡಾಯಿಸಿದೆ. ತಕ್ಷಣ ಆಲದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇವರನ್ನು ದಾಖಲಿಸಲಾಗಿದೆ. ಆದರೆ, ಇದರಲ್ಲಿ ಹಲವರ ಮತ್ತಷ್ಟು ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗೋಸ್ಕರ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.

ಅಸ್ವಸ್ಥರಾಗಲು ಕಾರಣವೇನು?
ಏಕಾಏಕಿ ಕಾರ್ಯಕ್ರಮದಲ್ಲಿ ಊಟ ಮಾಡಿದ 100ಕ್ಕೂ ಹೆಚ್ಚು ಜನರ ಆರೋಗ್ಯ ಸ್ಥಿತಿ ಹದಗೆಟ್ಟು ವಾಂತಿ, ಭೇದಿ, ತಲೆ ನೋವು ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಲು ಫುಡ್ ಪಾಯಿಸನ್ ಕಾರಣವಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಆದರೆ, ಇದುವರೆಗೆ ಆರೋಗ್ಯ ಹಾಳಾಗಲು ಖಚಿತ ಕಾರಣ ತಿಳಿದುಬಂದಿಲ್ಲ.
ಕಾರ್ಯಕ್ರಮದಲ್ಲಿ ಬಡಿಸಲಾದ ಊಟ, ನೀರನ್ನು ಪರೀಕ್ಷೆಗೋಸ್ಕರ ಆರೋಗ್ಯ ಇಲಾಖೆಯಿಂದ ಸಂಗ್ರಹಿಸಲಾಗಿದೆ. ತಪಾಸಣೆಯ ನಂತರವಷ್ಟೇ ಸ್ಪಷ್ಟ ಕಾರಣ ತಿಳಿದುಬರಲಿದೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/01/25/dial-112-launched-by-shivamogga-police-department/

error: Content is protected !!