ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಶಿವಮೊಗ್ಗಕ್ಕೆ ಕಾಲಿಟ್ಟಾಗಿನಿಂದ ಇದೇ ಮೊದಲು ಅತಿ ಕಡಿಮೆ ಪ್ರಕರಣ ಪತ್ತೆಯಾಗಿವೆ. ಸೋಮವಾರ ಬರೀ ಏಳು ಜನರಿಗೆ ಪಾಸಿಟಿವ್ ಬಂದಿದ್ದು, 14 ಜನ ಗುಣಮುಖರಾಗಿದ್ದಾರೆ.
569 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 301 ನೆಗೆಟಿವ್ ಬಂದಿವೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 347 ಜನ ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 3, ಭದ್ರಾವತಿ 0, ಶಿಕಾರಿಪುರ 1, ತೀರ್ಥಹಳ್ಳಿ 0, ಸೊರಬ 2, ಸಾಗರ 0, ಹೊಸನಗರ 0, ಹೊರ ಜಿಲ್ಲೆ 1 ಪ್ರಕರಣ ದೃಢಪಟ್ಟಿವೆ.