ಶಿವಮೊಗ್ಗದಲ್ಲಿ ನಡೆಯಲಿದೆ ಜನಸ್ವರಾಜ್ ಸಮಾವೇಶ, ಯಾರ‌್ಯಾರು ಭಾಗವಹಿಸಲಿದ್ದಾರೆ, ಹೇಗಿರಲಿ ದೆ ಕಾರ್ಯಕ್ರಮ?

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ನಗರದ ನ್ಯಾಷನಲ್ ಕಾಲೇಜಿನಲ್ಲಿ ನವೆಂಬರ್ 18ರಂದು ಮಧ್ಯಾಹ್ನ 3.30ಕ್ಕೆ `ಜನಸ್ವರಾಜ್ ಸಮಾವೇಶ’ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು .

ಶಿವಮೊಗ್ಗದಲ್ಲಿ ನಡೆಯುವ ಸಮಾವೇಶವನ್ನು ಬಿಜೆಪಿಯ ಪ್ರಮುಖರಾದ ಡಾ. ಅಶ್ವತ್ಥನಾರಾಯಣ, ವಿನಯ್ ಬಿದರೆ ನಿರ್ವಹಣೆ ಮಾಡಲಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರಮುಖರು ಆಗಮಿಸಲಿದ್ದಾರೆ. ಇದರ ನೇತೃತ್ವವನ್ನು ಸಚಿವ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ.

ದಾವಣಗೆರೆ ಮೂರು ವಿಧಾನ ಸಭಾ ಕ್ಷೇತ್ರ ಸೇರಿ ಶಿ ಮೊಗ್ಗ ಕ್ಷೇತ್ರದಲ್ಲಿ ಒಟ್ಟು 4,172 ಮತದಾರರಿದ್ದಾರೆ. 1,800 ಗ್ರಾಪಂ ಸದಸ್ಯರು ಬಿಜೆಪಿ ಕಾರ್ಯಕರ್ತರಿದ್ದಾರೆ. ಎಲ್ಲರನ್ನೂ ಸಂಘಟಿಸಲಾಗುತ್ತಿದೆ. ಗೆಲವು ನಿಶ್ಚಿತ.
– ಟಿ.ಡಿ.ಮೇಘರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ

FOLLOW US copy

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಾವೇಶ
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಸ್ವರಾಜ್ ಸಮಾವೇಶ ನಡೆಯಲಿದ್ದು, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಎಸ್.ಟಿ. ಸೋಮಶೇಖರ್, ಬಿಜೆಪಿ ಪ್ರಮುಖ ಶಂಕರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಹಿಸುವರು ಎಂದರು.
ಬಿಜೆಪಿ ಪ್ರಮುಖರಾದ ಧರ್ಮಪ್ರಸಾದ್, ಶಿವರಾಜ್, ಬಿ.ಕೆ.ಶ್ರೀನಾಥ್, ಕೆವಿ.ಅಣ್ಣಪ್ಪ, ಸುಧೀಂದ್ರ ಕಟ್ಟೆ ಉಪಸ್ಥಿತರಿದ್ದರು.

https://www.suddikanaja.com/2021/08/30/audition-by-hombale-production-house-in-shivamogga/

error: Content is protected !!