ಮತ್ತೆ ಮುನ್ನೆಲೆಗೆ ಬಂದ ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ವಿಚಾರ

 

 

ಸುದ್ದಿ ಕಣಜ.ಕಾಂ | DISTRICT | RELIGOIUS
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಲ್ಲಮಪ್ರಭು ದೇವರು ಇಲ್ಲವೇ ಅಕ್ಕಮಹಾದೇವಿ ನಾಮಕರಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಷ್ಟ್ರೀಯ ಬಸವದಳ ಟ್ರಸ್ಟಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ನಿರ್ವಿಕಲ್ಪ ತಿಳಿಸಿದರು.

follow us in link treeಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 23 ರಂದು ಬೆಳಗ್ಗೆ 11 ಗಂಟೆಗೆ ಗಾಂಧಿಪಾರ್ಕಿನ ಬಳಿಯ ಬಸವ ಪುತ್ಥಳಿಗೆ ಡಾ.ಮಾತೆ ಗಂಗಾ ದೇವಿ ಅವರು ಭಕ್ತಿ ಸಮರ್ಪಣೆ ಮಾಡಲಿದ್ದಾರೆ. ನಂತರ, ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಸಂಸತ್ ಭವನಕ್ಕೆ ಅನುಭವ ಮಂಟಪ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರವಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

21ರಂದು ವಿಶ್ವಧರ್ಮ ಪ್ರವಚನ ಕಾರ್ಯಕ್ರಮ

ಕಲ್ಲಹಳ್ಳಿಯಲ್ಲಿರುವ ಬಸವ ಮಂಟಪದಲ್ಲಿ ನವೆಂಬರ್ 21 ಮತ್ತು 22ರಂದು ರಾಷ್ಟ್ರೀಯ ಬಸವ ದಳದ ಟ್ರಸ್ಟ್ ವತಿಯಿಂದ 35ನೇ ಶರಣ ಮೇಳ ಪ್ರಚಾರಾರ್ಥವಾಗಿ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
21ರಂದು ಸಂಜೆ 6ಕ್ಕೆ ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಲಿದ್ದಾರೆ. ಸೂಡಾ ಅಧ್ಯಕ್ಷ ಎಸ್.ಎಸ್.ಜೋತಿಪ್ರಕಾಶ್, ಕೆ.ಈ.ಕಾಂತೇಶ್, ಪಾಲಿಕೆಯ ಸದಸ್ಯೆ ಅನಿತಾ ರವಿಶಂಕರ್ ಭಾಗವಹಿಸಲಿದ್ದಾರೆ.
ನ.22ರಂದು ಸಂಜೆ 6ಕ್ಕೆ ಪ್ರವಚನ ನಡೆಯಲಿದ್ದು, ಸಚಿವ ಕೆ.ಎಸ್ ಈಶ್ವರಪ್ಪ, ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಹಾಲಪ್ಪ ಪಾಲ್ಗೊಳ್ಳಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಬಾಣೂರು ಹಿರಣಯ್ಯ, ಹಾಲಪ್ಪ, ಬಾಳಾನಂದ, ರತ್ನಮ್ಮ, ಜ್ಯೋತಿ ಶಿವರಾಜ್, ಲತಾ, ರತ್ನಮ್ಮ ಕಾರನಹಳ್ಳಿ ಉಪಸ್ಥಿತರಿದ್ದರು.

https://www.suddikanaja.com/2021/11/10/baby-elephant-named-as-puneeth-at-sakrebalilu-elephant-camp/

error: Content is protected !!