ತಾಳಗುಪ್ಪ-ಮೈಸೂರು ರೈಲಿಗೆ ಎಕ್ಸ್ ಟ್ರಾ ಕೋಚ್, ಒಂದು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

 

 

ಸುದ್ದಿ ಕಣಜ.ಕಾಂ | DISTRICT | RAILWAY NEWS
ಶಿವಮೊಗ್ಗ: ನೈಋತ್ಯ ರೈಲ್ವೆ ವ್ಯಾಪ್ತಿಯ ಹಲವು ರೈಲುಗಳ ಸಂಚಾರದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಅದರಲ್ಲಿ ಶಿವಮೊಗ್ಗದಿಂದ ಹೊರಡುವ ಎರಡು ರೈಲುಗಳನ್ನು ಬದಲಾವಣೆ ಮಾಡಲಾಗಿದೆ.
ಮೈಸೂರು ತಾಳಗುಪ್ಪ ರೈಲಿಗೆ ಒಂದು ಕೋಚ್ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

follow us in link treeಮೈಸೂರು-ತಾಳಗುಪ್ಪ (ರೈಲು ಸಂಖ್ಯೆ 16227) ರೈಲಿನಲ್ಲಿ ಇನ್ಮುಂದೆ ಹೆಚ್ಚುವರಿಯಾಗಿ ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುವುದು. ನವೆಂಬರ್ 21ರಿಂದ ಇದು ಅನ್ವಯವಾಗಲಿದೆ. ಕೋಚ್ ಗಳ ಸಂಖ್ಯೆ 19 ಇರಲಿವೆ. ಅದೇ ರೀತಿ, ತಾಳಗುಪ್ಪ- ಮೈಸೂರು (ರೈಲು ಸಂಖ್ಯೆ 16228) ರೈಲಿನಲ್ಲಿ ಹೆಚ್ಚುವರಿ ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುವುದು.
ಶಿವಮೊಗ್ಗ-ಚಿಕ್ಕಮಗಳೂರು ರೈಲು ಸಂಚಾರದಲ್ಲಿ ಕೆಲವು ಬದಲಾವಣೆ
ಶಿವಮೊಗ್ಗ ನಗರದಿಂದ ಚಿಕ್ಕಮಗಳೂರು (ರೈಲು ಸಂಖ್ಯೆ 07365) ರೈಲನ್ನು ತಾತ್ಕಾಲಿಕವಾಗಿ ಬೀರೂರಿನವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ನವೆಂಬರ್ 23ರಿಂದ ಇದು ಅನ್ವಯವಾಗಲಿದೆ.

ಅದೇ ರೀತಿ, ಚಿಕ್ಕಮಗಳೂರು ರೈಲು ನಿಲ್ದಾಣದಿಂದ ಶಿವಮೊಗ್ಗಕ್ಕೆ ಸಂಚರಿಸುವ (ರೈಲು ಸಂಖ್ಯೆ 07366) ತಾತ್ಕಾಲಿಕವಾಗಿ ಬೀರೂರು-ಶಿವಮೊಗ್ಗ ನಗರಕ್ಕೆ ಬರಲಿದೆ. ನವೆಂಬರ್ 25ರಿಂದ ಇದು ಅನ್ವಯವಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

https://www.suddikanaja.com/2021/06/22/talguppa-mysuru-train-service-start/

error: Content is protected !!