ರಾಜಕಾರಣಿಗಳ ಫೇಸ್ಬುಕ್ ಖಾತೆಯನ್ನೂ ಬಿಡದ ಹ್ಯಾಕರ್ಸ್, ಎಂಎಲ್‍ಸಿ ಆಯನೂರು ಮಂಜುನಾಥ್ ಖಾತೆಗೂ ಹ್ಯಾಕ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ರಾಜಕಾರಣಿಗಳ ಫೇಸ್ಬುಕ್ ಖಾತೆಯನ್ನೂ ಹ್ಯಾಕರ್ ಗಳು ಬಿಡುತ್ತಿಲ್ಲ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ವೈಯಕ್ತಿಕ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಹ್ಯಾಕರ್ ಗಳು ಖಾತೆಗೆ ಕನ್ನ ಹಾಕಿದ್ದಲ್ಲದೇ ಆಯನೂರು ಮಂಜುನಾಥ್ ಅವರ ಖಾತೆಯಲ್ಲಿರುವ ಸ್ನೇಹಿತರಿಗೆ ಹಣವನ್ನು ಕೇಳಲಾಗಿದೆ. ತುರ್ತಾಗಿ ₹ 15,000 ನೀಡುವಂತೆ ಕೋರಲಾಗಿದೆ.

follow us in link treeಹ್ಯಾಕ್ ಆಗಿದ್ದು ತಿಳಿಯುತ್ತಲೇ ಆಪ್ತ ಕಾರ್ಯದರ್ಶಿ ಮೆಸೇಜ್
ಮೆಸೆಂಜರ್ ನಲ್ಲಿ ಹಣಕ್ಕಾಗಿ ಮನವಿ ಮಾಡಿರುವ ಕುರಿತು ಮಾಹಿತಿ ತಿಳಿಯುತ್ತಲೇ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಆಪ್ತ ಕಾರ್ಯದರ್ಶಿ ಅವರು ಖಾತೆಯಲ್ಲಿಯೇ ಸಂದೇಶವನ್ನು ಹಾಕಿದ್ದು, ಹಣ ಇತ್ಯಾದಿಗಳನ್ನು ಕೇಳಿದ್ದಲ್ಲಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ.

error: Content is protected !!