ಸುದ್ದಿ ಕಣಜ.ಕಾಂ
ಹೊಸನಗರ: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿಯನ್ನು ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.
ಸಿಗಂದೂರು ವಿಚಾರ ತಿಳಿಗೊಳಿಸಬೇಕಾದ ಮೈಸೂರು ಸೇಲ್ಸ್ ಇಂಟರ್’ನ್ಯಾಶನಲ್ ಲಿಮಿಟೆಡ್ (ಎಂಎಸ್.ಐಎಲ್) ಅಧ್ಯಕ್ಷರೂ ಆದ ಶಾಸಕ ಹರತಾಳು ಹಾಲಪ್ಪ ಸಿಗಂದೂರು ವಿಚಾರವನ್ನು ತಿಳಿಗೊಳಿಸಬಹುದಿತ್ತು. ಆದರೆ, ತಮ್ಮ ಸಮುದಾಯವನ್ನೇ ಬೀದಿಗಿಳಿದು ಹೋರಾಡುವಂತೆ ಮಾಡಿದ್ದಾರೆ ಎಂದು ಹೊಸನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಮ್ಮನೆ ಆರೋಪಿಸಿದರು.
ಕಾಗೋಡು ಅಪಹಾಸ್ಯ ಸಹಿಸಲಾಗದು: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಮುದಾಯಕ್ಕಾದ ಅನ್ಯಾಯದ ವಿರುದ್ಧ ದನಿ ಎತ್ತಿದ್ದರು. ಆದರೆ, ಅವರನ್ನೇ ಅಪಹಾಸ್ಯ ಮಾಡಲಾಗುತ್ತಿದೆ. ಇದನ್ನು ಸಹಿಲಾಗದು ಎಂದರು.