POWER CUT IN SHIVAMOGGA | ನಾಳೆ ಅರ್ಧ ಶಿವಮೊಗ್ಗದಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಡ್ಲಿ 110 ಕೆವಿ/11 ಕೆವಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಇರುವ ಕಾರಣ ಕೆಳಕಂಡ ಪ್ರದೇಶಗಳಲ್ಲಿ ಡಿಸೆಂಬರ್ 16ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಉಪ ವಿಭಾಗ 2ರ ಎಇಇ ಪ್ರಕಟಣೆಯಲ್ಲಿ ಕೋರಿದ್ದಾರೆ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಪಿಯರ್ ಲೈಟ್, ಶಂಕರ ಕಣ್ಣಿನ ಆಸ್ಪತ್ರೆ, ಗಾಜನೂರು ರೂರಲ್, ಕಲ್ಲೂರು ಮಂಡ್ಲಿ, ಊರಗಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್ ನಗರ, ಕೆ.ಎಚ್.ಬಿ.ಕಾಲೋನಿ, ಸಿದ್ದೇಶ್ವರ ಸರ್ಕಲ್ 100 ಅಡಿ ರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮಾರ್ನಮಿ ಬೈಲು, ಬಿ.ಎಚ್.ರಸ್ತೆ, ಕುಂಬಾರ ಕೇರಿ, ವಂದನಾ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1ನೇ ಹಂತ, 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆ.ಸಿ ನಗರ, ಎಲ್.ಎಲ್.ಬಿ. ರಸ್ತೆ, ದುರ್ಗಿಗುಡಿ, ನೆಹರೂ ರಸ್ತೆ ಎಡ ಭಾಗ, ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್ ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನ ಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್, ಕುಂಬಾರ ಗುಂಡಿ, ಉಪ್ಪಾರ ಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

https://www.suddikanaja.com/2021/11/11/elder-sister-saved-her-brother-from-electric-shock/

error: Content is protected !!