ನಾಳೆಯೂ ಬ್ಯಾಂಕ್ ಬಂದ್, ಇಂದಿನ ಪ್ರತಿಭಟನೆ ಹೇಗಿತ್ತು, ಸೇವೆ ಸಿಗದೇ ಗ್ರಾಹಕರ ಪರದಾಟ

 

 

ಸುದ್ದಿ‌ ಕಣಜ.ಕಾಂ | DISTRICT | BANK STRIKE
ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕುವೆಂಪು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ ಗಳನ್ನು ಖಾಸಗೀಕರಣ (bank privatization) ಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (United Forum of Bank Unions) ಡಿಸೆಂಬರ್ 16 ಮತ್ತು 17 ಮುಷ್ಕರಕ್ಕೆ ಕರೆ ನೀಡಿದೆ. ಅದನ್ನು ಬೆಂಬಲಿಸಿ ಶಿವಮೊಗ್ಗದಲ್ಲಿಯೂ ಪ್ರತಿಭಟನೆ ಮಾಡಲಾಯಿತು.

IMG 20211216 WA0014ವಿವಿಧ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ಬ್ಯಾಂಕ್ ಖಾಸಗೀಕರಣದ ವಿರುದ್ಧ ದನಿಗೂಡಿಸಿದರು.
ಬ್ಯಾಂಕ್ ಖಾಸಗೀಕರಣಗೊಳಿಸಿದರೆ ದೇಶದ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಹಾಗೂ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

READ | ಇಂದು, ನಾಳೆ ಎರಡು ದಿನ ಬ್ಯಾಂಕ್ ಬಂದ್, ಎಟಿಎಂಗಳಲ್ಲಿ ನೋ ಕ್ಯಾಶ್ ಸಾಧ್ಯತೆ

ಎರಡು ದಿನಗಳ‌ ಕಾಲ ಬ್ಯಾಂಕ್ ಬಂದ್ ಇರಲಿದ್ದು, ಪರಿಣಾಮ ರಾಷ್ಟ್ರೀಕೃತ ಬ್ಯಾಂಕ್‌ ಗಳ ಶಾಖೆಗಳಲ್ಲಿ ಹಣ ವರ್ಗಾವಣೆ, ಸ್ವೀಕೃತಿ, ಸಾಲ ಮಂಜೂರಾತಿ, ಚೆಕ್‌ ಕ್ಲಿಯರೆನ್ಸ್‌ ಮತ್ತಿತರ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ತೊಂದರೆಯಾಯಿತು. ಬ್ಯಾಂಕ್ ಬಂದ್ ಇರುವ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲದ್ದಕ್ಕೆ ಹಲವರು ನಾನಾ ಕೆಲಸಗಳಿಂದಾಗಿ ಬ್ಯಾಂಕ್ ಗಳಿಗೆ ಬಂದಿದ್ದರು. ಗ್ರಾಮೀಣ ಭಾಗದ ಜನರೂ ಬಂದಿದ್ದರು.
ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಜಿಲ್ಲಾ ಸಂಚಾಲಕ ಸಂಚಾಲಕ ಮಹಾಬಲೇಶ್ವರ ಹೆಗಡೆ, ಪದಾಧಿಕಾರಿಗಳು, ಬ್ಯಾಂಕ್ ನೌಕರರು ಉಪಸ್ಥಿತರಿದ್ದರು.

https://www.suddikanaja.com/2021/05/06/shahad-bagalakote-died/

error: Content is protected !!