ಶಿವಮೊಗ್ಗದಲ್ಲಿ ಡಿ.19ರಂದು ರಾಜ್ಯಮಟ್ಟದ ಡಾಗ್ ಶೋ ಜೊತೆಗೆ ರ‌್ಯಾಂಪ್ ವಾಕ್, ಗೆದ್ದವರಿಗೆ ಆಕರ್ಷಕ ಬಹುಮಾನ

 

 

ಸುದ್ದಿ ಕಣಜ.ಕಾಂ | KARNATAKA | DOG SHOW
ಶಿವಮೊಗ್ಗ: ನಗರದ ಎನ್‌.ಇ.ಎಸ್ ಮೈದಾನದಲ್ಲಿ ಡಿಸೆಂಬರ್ 19ರಂದು ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಶೋ ಆಯೋಜಿಸಲಾಗಿದೆ ಎಂದು ಕ್ಲಬ್‌ ಅಧ್ಯಕ್ಷ ಪ್ರೀತಮ್ ಹೇಳಿದರು.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಡಾಗ್ ಶೋದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 300ಕ್ಕೂ ಅಧಿಕ‌ ಶ್ವಾನಗಳು ಭಾಗವಹಿಸುವ ನಿರೀಕ್ಷೆ ಇದೆ.

READ | ಕುವೆಂಪುನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರು ಅರೆಸ್ಟ್

ಗೆದ್ದವರಿಗೆ ಬಹುಮಾನ
ಗೆದ್ದವರಿಗೆ‌ ಬಹುಮಾನ ನೀಡಲಾಗುವುದು. ಒಟ್ಟು 1 ಲಕ್ಷ ಮೌಲ್ಯದ ಬಹುಮಾನವಿದೆ. ಮೊದಲ ಬಹುಮಾನ ₹25,000, ಎರಡನೇ ಬಹುಮಾನ ₹20,000, ಮೂರನೇ ಬಹುಮಾನಕ್ಕೆ ₹15,000 ಇದೆ. ಜೊತೆಗೆ 6 ಬಗೆಯ ಬಹುಮಾನಗಳು ಇವೆ. ಉತ್ತಮ ಶ್ವಾನಕ್ಕೆ ₹5,000ದಿಂದ 1,000ವರೆಗೆ ಬಹುಮಾನವಿದೆ. ಶ್ವಾನದ ಫ್ಯಾಷನ್ ಶೋ ರ‌್ಯಾಂಪ್ ವಾಕ್ ಕೂಡ ಇದ್ದು, ಮಾಲೀಕರೂ ಇದರಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.
ಮುಂಚೆಯೇ ಭಾಗವಹಿಸುವ ಬಗ್ಗೆ ನೋಂದಣಿ ಮಾಡಿಸಿಕೊಂಡರೆ ₹300 ಶುಲ್ಕ ಇರಲಿದೆ. ಅದೇ ಸ್ಪಾಡ್ ಎಂಟ್ರಿ ಶುಲ್ಕಕ್ಕೆ ₹500 ನಿಗದಿಪಡಿಸಲಾಗಿದೆ. ಮಾಹಿತಿಗಾಗಿ 7676441122, 9964289695ಕ್ಕೆ ಸಂಪರ್ಕಿಸಬಹುದು ಎಂದು ಹೇಳಿದರು. ಕ್ಲಬ್‌ನ ಸಂಜು, ಮನೋಹರ್ ಇದ್ದರು.

https://www.suddikanaja.com/2021/07/23/history-of-korpalayya-mantapa/

error: Content is protected !!