ತ್ಯಾವರೆಕೊಪ್ಪ ಹುಲಿ, ಸಿಂಹ ಧಾಮಕ್ಕೆ ಮತ್ತೊಂದು ಅತಿಥಿ ಆಗಮನ, ಇದು ರಾಜ್ಯದ ಮೂರನೇ ಮೃಗಾಲಯ

 

 

ಸುದ್ದಿ ಕಣಜ.ಕಾಂ | KARNATAKA | SHIVAMOGGA ZOO
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯಕ್ಕೆ ಹೊಸ ಅತಿಥಿಯೊಂದು ಬಂದಿದ್ದು, ಖುಷಿಯ ವಾತಾವರಣ ಮನೆ ಮಾಡಿದೆ.
ಪ್ರವಾಸಿಗರ ಮನ ಸೆಳೆಯುವುದಕ್ಕಾಗಿ ಮೈಸೂರು ಮೃಗಾಲಯದಿಂದ ಹೆಣ್ಣು ನೀರಾನೆಯೊಂದನ್ನು ತರಲಾಗಿದ್ದು, ಗಂಡು ನೀರಾನೆ ‘ವಿಷ್ಣು’ಗೆ ‘ಹಂಸ’ ಜೋಡಿಯಾಗಿದೆ.
ಇದುವರೆಗೆ ಮೈಸೂರು, ಬನ್ನೇರುಘಟ್ಟದಲ್ಲಿ ಮಾತ್ರ ನೀರಾನೆ ಇತ್ತು. ಅದರ ಸಾಲಿಗೆ ‘ಶಿವಮೊಗ್ಗ ಝೂ’ ಕೂಡ ಸೇರ್ಪಡೆಯಾಗಿದೆ.
ಒಂದೇ ಆವರಣದಲ್ಲಿ ಗಂಡು, ಹೆಣ್ಣು ನೀರಾನೆ
ಅಕ್ಟೋಬರ್ ನಲ್ಲಿ ಗಂಡು‌ ನೀರಾನೆಯನ್ನು ತರಲಾಗಿತ್ತು. ಆಗ ಅದಕ್ಕೆ ಪ್ರತ್ಯೇಕ ಎನ್ ಕ್ಲೋಸರ್ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿಯೇ ಹೆಣ್ಣು ನೀರಾನೆಯನ್ನು ಬಿಡಲಾಗಿದೆ. ಇದರಿಂದ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲೂ ಅನುಕೂಲವಾಗಲಿದೆ.

error: Content is protected !!