ಕುವೆಂಪು ವಿವಿ ದೂರಶಿಕ್ಷಣ ಪರೀಕ್ಷೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು, ಪ್ರತಿಭಟನೆಯ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ | TALUK | DISTANCE EDUCATION
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ನಡೆಸಲು ಉದ್ದೇಶಿಸಿರುವ ದೂರಶಿಕ್ಷಣ (distance education) ಪರೀಕ್ಷೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ, ಉಗ್ರ ಪ್ರತಿಭಟನೆ ಮಾಡುವುದಾಗಿ ಎನ್.ಎಸ್.ಯು.ಐ (NSUI) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಕುವೆಂಪು ವಿವಿ 2019-20ನೇ ಸಾಲಿನ ದೂರ ಶಿಕ್ಷಣ ವಿದ್ಯಾರ್ಥಿಗಳ ಪ್ರಥಮ ವರ್ಷದ ಪದವಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಹೀಗಾಗಿ, ಕೂಡಲೇ ಪರೀಕ್ಷೆ ರದ್ದುಪಡಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಎನ್.ಎಸ್.ಯು.ಐ ಆಗ್ರಹಿಸಿದೆ.

2019-20ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯ (kuvempu university) ದಲ್ಲಿ ದೂರಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷದ ಪದವಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶಾತಿ (admission) ಪಡೆದಿದ್ದು, ಕೋವಿಡ್ (covid) ಕಾರಣದಿಂದ ದೂರಶಿಕ್ಷಣ ವಿದ್ಯಾರ್ಥಿಗಳಿಗೆ ಎರಡು ವರ್ಷ ಪರೀಕ್ಷೆ ನಡೆಸಲು ಸಾಧ್ಯವಾಗಿರುವುದಿಲ್ಲ.

ಪ್ರಮೋಟ್ ಮಾಡುವುದಾಗಿ ಹೇಳಿ ಪರೀಕ್ಷೆಗೆ ಮುಂದಾದ ವಿವಿ
2019-20ನೇ ಸಾಲಿನಲ್ಲಿ ದೂರ ಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ತಿಳಿಸುವ ಜತೆಯಲ್ಲಿ 2021-22ನೇ ಸಾಲಿನಲ್ಲಿ ಅದೇ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಇದೀಗ ಏಕಾಏಕಿ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚಿಸಿರುವುದು ಸರಿಯಲ್ಲ.
ಈಗಾಗಲೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮೋಟ್ ನೀಡಿ ದ್ವಿತೀಯ ವರ್ಷದ ಪದವಿ ಪ್ರವೇಶಾತಿ ನೀಡಿರುವುದರಿಂದ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

READ | ಚಲಿಸುತ್ತಿದ್ದ ಓಮ್ನಿಯಲ್ಲಿ ದಿಢೀರ್ ಬೆಂಕಿ, ಸುಟ್ಟು ಕರಕಲಾದ ವ್ಯಾನ್

ಕೂಡಲೇ ಕುವೆಂಪು ವಿವಿ ಹೊರಡಿಸಿರುವ ಪ್ರಥಮ ವರ್ಷದ ಪರೀಕ್ಷೆ ಬರೆಯುವ ಸೂಚನೆ ರದ್ದುಪಡಿಸಬೇಕು. ದ್ವಿತೀಯ ವರ್ಷದ ಪಠ್ಯಕ್ರಮಕ್ಕೆ ಅನುಗುಣವಾಗಿ ಮುಂದಿನ ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಎನ್.ಎಸ್.ಯು.ಐ ಕುವೆಂಪು ವಿ.ವಿ ಘಟಕದ ಅಧ್ಯಕ್ಷ ಮುರುಗೇಶ್, ನಗರ ಅಧ್ಯಕ್ಷ ವಿಜಯ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ, ವಿದ್ಯಾರ್ಥಿಗಳಾದ ಚಂದ್ರೋಜಿರಾವ್, ರವಿ, ಆಕಾಶ್, ಅರ್ಪಿತ ಹಾಗೂ ನೂರಾರು ಜನ ವಿದ್ಯಾರ್ಥಿಗಳು ಪಾಲೊಂಡಿದ್ದರು.

https://www.suddikanaja.com/2021/11/26/university-of-agricultural-and-horticultural-sciences-shivamogga-6th-convocation-karnataka-governor-participated-in-program-at-navule-campus/

error: Content is protected !!