ಶಿವಮೊಗ್ಗ- ಯಶವಂತಪುರ ರೈಲಿಗೆ ಒಂದು ಎಸಿ ಬೋಗಿ ಜೋಡಣೆ

 

 

ಸುದ್ದಿ ಕಣಜ.ಕಾಂ | KARNATAKA | TRAIN NEWS
ಶಿವಮೊಗ್ಗ: ಶಿವಮೊಗ್ಗದಿಂದ ಯಶವಂತಪುರ ಸಂಚರಿಸುವ ರೈಲಿಗೆ ಒಂದು ಹೆಚ್ಚುವರಿ ಎಸಿ ವಿಸ್ಟಾಡೋಮ್ ಬೋಗಿಯನ್ನು ಜೋಡಣೆ ಮಾಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ನೈಋತ್ಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ- ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

25ರಿಂದ ಹೆಚ್ಚುವರಿ ಬೋಗಿ ಜೋಡಣೆ

ಡಿಸೆಂಬರ್ 25ರಿಂದ 2022ರ ಮಾರ್ಚ್ 31ರ ವರೆಗೆ ರೈಲು ಸಂಖ್ಯೆ 16579 ಯಶವಂತಪುರ ಶಿವಮೊಗ್ಗ ಟೌನ್ ಇಂಟರ್‍ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಒಂದು ಎಸಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ. ಅದೇ ರೀತಿ, ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‍ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬೋಗಿಯನ್ನು ತಾತ್ಕಾಲಿಕವಾಗಿ ಜೋಡಣೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ತಿಳಿಸಲಾಗಿದೆ.

https://www.suddikanaja.com/2021/09/02/provident-fund-e-nomination-process-has-been-started/

error: Content is protected !!