ಟೀ ಮಾರಾಟ ಮಾಡಿದ ಅತಿಥಿ‌ ಉಪನ್ಯಾಸಕರು

 

 

ಸುದ್ದಿ ಕಣಜ.ಕಾಂ | CITY | PROTEST NEWS
ಶಿವಮೊಗ್ಗ: ಅತಿಥಿ‌ ಉಪನ್ಯಾಸಕರು ಗುರುವಾರ ಚಹ ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಐದನೇ ದಿನದಂದು‌ ಮಜ್ಜಿಗೆ ಮಾರಾಟ ಮಾಡಿದ್ದ‌ ಪ್ರತಿಭಟನಾಕಾರರು ಗುರುವಾರ ಚಹ ಮಾರಾಟ ಮಾಡಿದರು.

READ | ಹಾಲ್ ಟಿಕೆಟ್ ಹರಿದು ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿಗಳು, ಆಕ್ರೋಶಕ್ಕೇನು ಕಾರಣ?

ಅತಿಥಿ‌ ಉಪನ್ಯಾಸಕರ ಬೇಡಿಕೆಗಳೇನು?
ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ನೀಡಬೇಕು ಅತಿಥಿ ಉಪನ್ಯಾಸಕರ ಸೇವೆಯನ್ನು ನಿಯಮ 14ರ ಅಡಿಯಲ್ಲಿ ವಿಲೀನಗೊಳಿಸಿ ಕಾಯಂಗೊಳಿಸಬೇಕು. ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ತಡೆಯಬೇಕು.
ಸಮಿತಿ ರಾಜ್ಯಾಧ್ಯಕ್ಷ ಡಾ. ಎಚ್. ಸೋಮಶೇಖರ್ ಶಿಮೊಗ್ಗಿ, ಚಂದ್ರಪ್ಪ, ಸತೀಶ್ ಕುಮಾರ್, ಧನಂಜಯ್ ಸ್ವಾಮಿ, ರೂಪಾ, ಡಾ. ಅನ್ನಪೂರ್ಣ, ದೀಪಾ, ಕೋಮಲಾ, ಡಾ. ಶೀಲಾ, ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್, ಖಜಾಂಚಿ ರಾಜೇಶ್ ಕುಮಾರ್ ಉಪಸ್ಥಿತರಿದ್ದರು.

https://www.suddikanaja.com/2021/03/02/areca-tea-ceo-nivedan-nempe-nominated-for-presigius-annula-list-of-most-influential-asians-2020-21/

error: Content is protected !!