ಸುದ್ದಿ ಕಣಜ.ಕಾಂ | TALK | WILD ELEPHANT
ಶಿವಮೊಗ್ಗ: ಹಾಲ್ ಲಕ್ಕವಳ್ಳಿಯಲ್ಲಿ ಕಾಡಾನೆಗಳು ಶುಕ್ರವಾರ ರಾತ್ರಿ ತೋಟಗಳಿಗೆ ನುಗ್ಗಿದ್ದು, ಅಡಿಕೆ, ಬಾಳೆ ಸಸಿಗಳು ಬುಡಮೇಲು ಮಾಡಿವೆ.
ಇತ್ತೀಚೆಗೆ, ಲಕ್ಕಿನಕೊಪ್ಪ, ಯರಗನಾಳ್, ಕಡೇಕಲ್, ಹಾಲ್ ಲಕ್ಕವಳ್ಳಿ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಾಡಾನೆಗಳ ದಾಂಧಲೆ ನಡೆಯುತ್ತಿದ್ದು, ತೋಟದ ಮಾಲೀಕರು ಆತಂಕದಲ್ಲಿದ್ದಾರೆ.