ಲಕ್ಕಿ ಡ್ರಾ ಆಸೆ ತೋರಿಸಿ ಯುವತಿಗೆ 1.40 ಲಕ್ಷ ರೂ. ಮೋಸ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಯುವತಿಯೊಬ್ಬಳಿಗೆ ಲಕ್ಕಿ ಡ್ರಾ ಆಸೆ ತೋರಿಸಿ 1.40 ಲಕ್ಷ ರೂಪಾಯಿ ವಂಚಿಸಲಾಗಿದೆ.

ಯುವತಿಯೊಬ್ಬಳಿಗೆ ವಾಟ್ಸಾಪ್ ಕರೆ ಮಾಡಿ ಲಕ್ಕಿ ಡ್ರಾ ಬಹುಮಾನ ಬಂದಿದ್ದು, 16,000 ರೂಪಾಯಿ ಪಾವತಿಸಬೇಕು ಎಂದು ಸೂಚಿಸಿದ್ದಾರೆ. ಅದನ್ನು ನಂಬಿದ ಯುವತಿಯು ಹೇಳಿದಷ್ಟು ಹಣ ನೀಡಿದ್ದಾಳೆ. ತದನಂತರವೂ ಲಕ್ಕಿ ಡ್ರಾ ಹಣ ಬಂದಿಲ್ಲ. ಮತ್ತೆ ಕರೆ ಮಾಡಿ ಹಂತ ಹಂತವಾಗಿ ಒಟ್ಟು 1.40 ಲಕ್ಷ ರೂಪಾಯಿ ಹಣವನ್ನು ಖಾತೆಗೆ ಯುವತಿಯು ವರ್ಗಾಯಿಸಿದ್ದಾಳೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!