ಪಂಜಾಬ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಬಿಜೆಪಿ ಆಕ್ರೋಶ

 

 

ಸುದ್ದಿ ಕಣಜ.ಕಾಂ | CITY | BJP PROTEST
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನ ಮಾಡಿರುವುದಾಗಿ ಆರೋಪಿಸಿ ಜಿಲ್ಲಾ ಬಿಜೆಪಿಯು ಗುರುವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಪಂಜಾಬ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

READ | ಶಿವಮೊಗ್ಗದಲ್ಲಿ ವೀಕೇಂಡ್ ಕರ್ಫ್ಯೂ ಟೂರಿಸ್ಟ್ ಪ್ಲೇಸ್‍ಗೆ ನೋ ಎಂಟ್ರಿ, ಯಾವುದಕ್ಕೆಲ್ಲ ನಿರ್ಬಂಧ, ಡಿಸಿ ಸಭೆಯ ಟಾಪ್ 5 ಪಾಯಿಂಟ್ಸ್

ಪಂಜಾಬ್ ಸರ್ಕಾರದ ನಿರ್ಲಕ್ಷ್ಯದ ಆರೋಪ
ಮೋದಿ ಅವರು ಪಂಜಾಬ್ ನಲ್ಲಿರುವ ಭಟಿಂಡಾದಲ್ಲಿರುವ ಫಿರೋಜ್ ಪುರದ ಪುರದ ಹುಸೇನ್ ವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು. ಹಾಗೂ ಅಲ್ಲಿ ಸ್ವಾತಂತ್ರ್ಯವೀರ ಹುತಾತ್ಮರಿಗೆ ಗೌರವ ಸಲ್ಲಿಸಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಅವರು ವಿಮಾನದ ಬದಲು ರಸ್ತೆ ಮಾರ್ಗದ ಮೂಲಕ ಹೊರಟ್ಟಿದ್ದರು. ಈ ವಿಚಾರ ಸಂಬಂಧಪಟ್ಟ ರಾಜ್ಯದ ಸಿಎಂಗೂ ಗಮನದಲ್ಲಿತ್ತು. ರಸ್ತೆ ಬದಿ ರೈತರ ಪ್ರತಿಭಟನೆ ನಡೆಯುತ್ತಿದ್ದಾಗ ಪಿಎಂ ಅವರ ಬೆಂಗಾವಲು ಪಡೆ ಆತಂಕಗೊಂಡು ಪಂಜಾಬ್ ಸರ್ಕಾರದ ಮುಖ್ಯಮಂತ್ರಿಗೆ ಕರೆ ಮಾಡಿದೆ. ಆದರೆ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ರಾಜ್ಯದ ಭದ್ರತಾ ಅಧಿಕಾರಿಗಳು ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಇದು ಪ್ರಧಾನ ಮಂತ್ರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಪದ್ಮನಾಭ ಭಟ್, ಮೋಹನ್ ರೆಡ್ಡಿ, ಬಳ್ಳೆಕೆರೆ ಸಂತೋಷ್, ಎನ್.ಕೆ. ಜಗದೀಶ್, ಚನ್ನಬಸಪ್ಪ, ಮೇಯರ್ ಸುನೀತಾ ಅಣ್ಣಪ್ಪ, ಅನಿತಾ ರವಿಶಂಕರ್, ಸುವರ್ಣಾ ನಾಗರಾಜ್, ಸುರೇಖಾ ಮುರಳೀಧರ್ ಭಾಗವಹಿಸಿದ್ದರು.

https://www.suddikanaja.com/2021/06/23/kannada-added-into-pride-language-training/

error: Content is protected !!