weekend curfew 2ನೇ ದಿನ | ಹೇಗಿದೆ ಶಿವಮೊಗ್ಗದಲ್ಲಿ ಬಸ್, ಆಟೋ ಸಂಚಾರ, ಜನಸಂಚಾರ

 

 

ಸುದ್ದಿ ಕಣಜ.ಕಾಂ | DISTRICT | CURFEW WEEKEND
ಶಿವಮೊಗ್ಗ: ವೀಕೆಂಡ್ ಕರ್ಫ್ಯೂ (weekend curfew) ಎರಡನೇ ದಿನದಂದು ಸಹ ಶಿವಮೊಗ್ಗ ಸ್ತಬ್ದವಾಗಿದೆ. ನಗರದ ಎಲ್ಲ ರಸ್ತೆಗಳು ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ. ಅದರಲ್ಲೂ ಸದಾ ಜನ ಜಂಗುಳಿಯಿಂದ ಕೂಡಿರುವ ಎಎ ವೃತ್ತ, ನೆಹರೂ ರಸ್ತೆ, ಬಿಎಚ್.ರಸ್ತೆ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲೂ ಜನಸಂದಣಿ ಕಡಿಮೆ ಇದೆ.

ವೀಕೆಂಡ್ ಕರ್ಫ್ಯೂನಲ್ಲಿ ಹೇಗಿದೆ ಶಿವಮೊಗ್ಗ, ಬಸ್ ಸಂಚಾರ ಇದೆಯೇ, ವಿಡಿಯೋ ವೀಕ್ಷಿಸಿ (VIDEO REPORT)

READ | ಜನಸ್ನೇಹಿ ಐಪಿಎಸ್ ಅಧಿಕಾರಿ ವಿಕ್ರಂ ಆಮ್ಟೆ ಶಿವಮೊಗ್ಗದ ನೂತನ ಎಎಸ್‍ಪಿ

ನಗರ ಸಾರಿಗೆ ಸಂಚಾರ, ಕೆ.ಎಸ್.ಆರ್.ಟಿ.ಸಿ ಬಸ್ (KSRTC Bus)ಗಳ ಓಡಾಟವೂ ಇದೆ. ಆದರೆ, ಖಾಸಗಿ ಬಸ್  (private bus) ನಿಲ್ದಾಣದಲ್ಲಿ ಅಪರೂಪಕ್ಕೊಂದು ಬಸ್ ಸಂಚರಿಸುತ್ತಿದ್ದು, ಪ್ರಯಾಣಿಕರೂ ಇಲ್ಲ.

ಹೋಟೆಲ್, ಮೆಡಿಕಲ್, ದಿನಸಿ ಅಂಗಡಿಗಳು ತೆರೆದಿದ್ದು, ಅಲ್ಲಿಯೂ ಹೇಳಿಕೊಳ್ಳುವಷ್ಟು ಜನರಿಲ್ಲ. ಟೂರ್ ವಾಹನಗಳು, ಆಟೋ ಚಾಲಕರಿಗೂ (auto driver) ವ್ಯಾಪಾರವಿಲ್ಲ. ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಆಧಾರದ ಮೇಲೆ ಬಸ್ ಸಂಚಾರವಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಗಸ್ತು ಇದ್ದು, ಸಾರ್ವಜನಿಕರ ದಾಖಲೆಗಳನ್ನು ಪರಿಶೀಲಿಸಿದ ನಂತರವಷ್ಟೇ ಬಿಡಲಾಗುತ್ತಿದೆ. ಅನಗತ್ಯವಾಗಿ ಓಡಾಡುವ ಹಾಗೂ ಮಾಸ್ಕ್ ಇಲ್ಲದೇ ಸಂಚರಿಸುವವರ ಮೇಲೆಯೂ ಕ್ರಮಕೈಗೊಳ್ಳಲಾಗುತ್ತಿದೆ.

https://www.suddikanaja.com/2022/01/08/strict-weekend-curfew-in-shivamogga-police-deputed-in-many-places-to-control-people/

error: Content is protected !!