ಖರ್ಗೆ ಹೇಳಿದ್ದು ನಿಜ: ಸಚಿವ ಕೆ.ಎಸ್.ಈಶ್ವರಪ್ಪ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದು ನಿಜ. ನಾಯಕತ್ವ ದುರ್ಬಲಗೊಳಿಸಿದರೆ ಕಾಂಗ್ರೆಸ್ ನಾಶವಾಗುತ್ತದೆ. ಹೈಕಮಾಂಡ್ ಬಲಪಡಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಿದ್ಧಾಂತಗಳನ್ನು ಬಿಟ್ಟಿದೆ. ನಾಯಕರು ಒಗ್ಗೂಡದಿದ್ದಲ್ಲಿ ಪಕ್ಷ ನಿರ್ನಾಮ ಆಗುವ ಬಗ್ಗೆ ಖರ್ಗೆ ಅವರು ಹೇಳಿದ್ದರು ಎಂದು ಈಶ್ವರಪ್ಪ ಪುನರುಚ್ಛಿಸಿದರು.
ಕಾಂಗ್ರೆಸ್ ಇತಿಹಾಸ ಗಮನಿಸಿದರೆ, ಆ ಪಕ್ಷದಲ್ಲಿ ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಅವರಂಥಹ ಮುತ್ಸದ್ದಿಗಳು ಇದ್ದರು. ಆದರೀಗ ಪಕ್ಷಕ್ಕೆ ನಾಯಕರೇ ಗತಿ ಇಲ್ಲ. ಜನಬೆಂಬಲವೂ ಇಲ್ಲ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!