ಸುದ್ದಿ ಕಣಜ.ಕಾಂ | DISTRICT | SAKSHAMA
ಶಿವಮೊಗ್ಗ: ಅಂಗವಿಕಲರ ಹಕ್ಕುಗಳ ಅಧಿನಿಯಮ ಅಡಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ವಿಕಲಚೇತನರಿಗೆ ರ‌್ಯಾಂಪ್, ರೀಲಿಂಗ್ಸ್, ಶೌಚಾಲಯ ಕಡ್ಡಾಯ. ಆದರೆ, ನಗರದಲ್ಲಿರುವ ವಿಕಲಚೇತನರ ಕಚೇರಿಗೇ ಈ ವ್ಯವಸ್ಥೆ ಸರಿಯಾಗಿಲ್ಲ.
ಹೀಗೆಂದು ಆರೋಪಿಸಿ ‘ಸಕ್ಷಮ’ ಜಿಲ್ಲಾ ಘಟಕದಿಂದ ಬುಧವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಗೆ ಓಡಾಡಲು ನೇರವಾಗಿ ರ್ಯಾಂಪ್ ಮತ್ತು ರೀಲಿಂಗ್ಸ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.