ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಪಾಸಿಟಿವ್ ಪ್ರಕರಣ ಮತ್ತೆ ಏರಿಕೆ ಕಂಡಿದ್ದು, ಜಿಲ್ಲೆಯಲ್ಲಿ ಭಾನುವಾರ 339 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಶಿವಮೊಗ್ಗ ಮತ್ತು ಭದ್ರಾವತಿಯದ್ದು ಬಹುಪಾಲಿದೆ.
ಶಿವಮೊಗ್ಗ ತಾಲೂಕಿನಲ್ಲಿ 120, ಭದ್ರಾವತಿಯಲ್ಲಿ 105 ಪ್ರಕರಣಗಳು ಪತ್ತೆಯಾದರೆ, ತೀರ್ಥಹಳ್ಳಿಯಲ್ಲಿ 23, ಶಿಕಾರಿಪುರ 4, ಸಾಗರ 48, ಹೊಸನಗರ 24, ಸೊರಬ 8, ಹೊರ ಜಿಲ್ಲೆಯ 7 ಪ್ರಕರಣಗಳು ದೃಢಪಟ್ಟಿವೆ.
ರೋಗದ ಲಕ್ಷಣ ಹೊಂದಿರುವ 1,089 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಹಿಂದಿನದ್ದು ಸೇರಿ 2,539 ಮಂದಿಯದ್ದು ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 62, ಡಿಸಿಎಚ್.ಸಿಯಲ್ಲಿ 30, ಖಾಸಗಿ 36, ಮನೆ ಆರೈಕೆಯಲ್ಲಿ 1,374 ಟ್ರಿಯೇಜ್ ನಲ್ಲಿ 54 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 1,556ಕ್ಕೆ ಏರಿಕೆಯಾಗಿದೆ.