ಸುದ್ದಿ ಕಣಜ.ಕಾಂ | TALUK | LIQUOR SEIZE
ತೀರ್ಥಹಳ್ಳಿ: ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ಸಿಬ್ಬಂದಿಯ ತಂಡ ವಿವಿಧೆಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
3 ಪ್ರಕರಣ, ಇಬ್ಬರು ಅರೆಸ್ಟ್
ಮೂರು ಪ್ರತ್ಯೇಖ ಪ್ರಕರಣಗಳನ್ನು ದಾಖಲಿಸಲಾಗಿದ್ದು, ನಾಗರಾಜ್ ಮತ್ತು ರವಿ ಎಂಬುವವರನ್ನು ಬಂಧಿಸಲಾಗಿದೆ.
ಅಬಕಾರಿ ಉಪ ಆಯುಕ್ತ ಡಾ.ಸಿ.ಎಚ್.ಬಾಲಕೃಷ್ಣ ಅವರ ನಿರ್ದೇಶನದಲ್ಲಿ ಅಬಕಾರಿ ನಿರೀಕ್ಷಕ ಹಾಲಾ ನಾಯ್ಕ್ ಮತ್ತು ಉಪ ನಿರೀಕ್ಷಕ ಪಿ.ಜೆ.ಜಾನ್, ಸಿಬ್ಬಂದಿ ರಂಜನ್, ನಾಗರಾಜ್, ವಾಹನ ಚಾಲಕ ಅರ್ಜುನ್ ಕಾರ್ಯಾಚರಣೆ ಮಾಡಿದ್ದಾರೆ.