ಕುಮದ್ವತಿಗೆ ಮರುಜೀವ ತುಂಬಿದ ಯುವಪಡೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಲ್ಲೊಂದು ಯುವಪಡೆ ಇದೆ. ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ ಸೈ ಎನಿಸಿಕೊಂಡಿದೆ. ಇತ್ತೀಚೆಗೆ, ಹೊಸನಗರ ತಾಲೂಕಿನಲ್ಲಿ ಹರಿಯುವ ಕುಮದ್ವತಿ ನದಿಯ ಉಗಮ ಸ್ಥಾನವನ್ನು ಸ್ವಚ್ಚತಾ ಕಾರ್ಯ ಮಾಡಿ ಮಾದರಿ ಎನಿಸಿಕೊಂಡಿದೆ.
ಎಸ್ ಎಎಂಪಿ3 ಹಾಗೂ ನಮ್ಮದೇ ನಗರ ತಂಡದಿಂದ ಪಂಚನದಿಗಳ ಉಗಮ ಸ್ಥಾನ ಕುಮದ್ವತಿ ತೀರ್ಥವನ್ನು ಸ್ವಚ್ಚಗೊಳಿಸಲಾಗಿದ್ದು, ಇದಕ್ಕೆ ಮೂಲೆಗದ್ದೆ ಶ್ರೀ, ಸುದೀಂದ್ರ ಭಂಡಾರ್ಕರ್ ಸಹ ಸಾಥ್ ನೀಡಿದ್ದರು.
ಕಳೆದ ವರ್ಷ ಮೆಟ್ಟಿಲು ಸ್ವಚ್ಚತೆ ಮಾಡಲಾಗಿತು. ಈ ಸಲ ಹೂಳು ತುಂಬಿ ಹಾಳಾಗಿದ್ದ ಪುಷ್ಕರಣಿಗೆ ಮರುಕಳೆ ತುಂಬಿದರು. ಬರುವ ವರ್ಷ ಕೆರೆ ಜೀರ್ಣೋದ್ಧಾರ ಮಾಡುವ ಯೋಜನೆ ಇದೆ. ಆದರೆ, ಈ ಕೆಲಸಕ್ಕೆ ಜೆಸಿಬಿ ಯಂತ್ರದ ಅಗತ್ಯ ಇರುವುದರಿಂದ ಯಾರಾದರೂ ಸಹಾಯ ಮಾಡಿದ್ದಲ್ಲಿ ಯುವಪಡೆ ಉತ್ಸಾಹ ಇಮ್ಮಡಿಗೊಳ್ಳುವುದಲ್ಲದೇ ಕೆರೆ ಉಳಿವಿಗೂ ಸಹಕಾರಿಯಾಗಲಿದೆ.
ತಂಡದಲ್ಲಿರುವವರು: ಮೂಲೆಗದ್ದೆ ಶ್ರೀಗಳು, ಸುಧಿಂದ್ರ ಭಂಡಾರ್ಕರ್, ವಿನಾಯಕ ಪ್ರಭು, ಶ್ರೀಕಾಂತ್, ಡಿ.ಪ್ರದೀಪ್, ಅಕ್ಷಯ್, ಸತ್ಯನಾರಾಯಣ, ವಿನಯ್ ಕುಮಾರ್, ಶಿಕ್ಷಕ ರವಿ, ಕವಿರಾಜ್, ಅಭಿಲಾಶ್,ಮೋಹನ್,ಎಸ್.ಅಭಿಲಾಶ್ ನೇತೃತ್ವದಲ್ಲಿ ಕುಮದ್ವತಿ ತೀರ್ಥ ಜೀರ್ಣೋದ್ಧಾರ ಮಾಡಲಾಯಿತು.

ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ: https://youtu.be/aN7DprquzYo

Leave a Reply

Your email address will not be published. Required fields are marked *

error: Content is protected !!