ಶಿವಮೊಗ್ಗ, ಭದ್ರಾವತಿಯಲ್ಲಿ ಶತಕ ದಾಟಿದ ಸೋಂಕು, ಜಿಲ್ಲೆಯಲ್ಲಿ 400ಕ್ಕೂ ಅಧಿಕ ಪಾಸಿಟಿವ್, ಇಬ್ಬರ ಸಾವು

 

 

ಸುದ್ದಿ ಕಣಜ.ಕಾಂ | DISTRICT | HEALTH NEWS 
ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಆರಂಭದಿಂದಲೂ ಪ್ರಕರಣಗಳ ಸಂಖ್ಯೆ ಅಧಿಕವಿದ್ದು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಇಳಿಕೆಯಾಗಿತ್ತು.
ಶಿವಮೊಗ್ಗ ತಾಲೂಕಿನಲ್ಲಿ 137 ಮಂದಿಗೆ ಸೋಂಕು ದೃಢಪಟ್ಟಿದೆ. ಭದ್ರಾವತಿಯಲ್ಲಿ 111, ತೀರ್ಥಹಳ್ಳಿಯಲ್ಲಿ 52, ಶಿಕಾರಿಪುರದಲ್ಲಿ 45, ಸಾಗರದಲ್ಲಿ 63, ಹೊಸನಗರದಲ್ಲಿ 20, ಸೊರಬದಲ್ಲಿ 34 ಹಾಗೂ ಬಾಹ್ಯ ಜಿಲ್ಲೆಯ 23 ಜನರಲ್ಲಿ ಸೋಂಕು ಪತ್ತೆಯಾಗಿದೆ.

READ | ಗಾಜನೂರು ಬಳಿ ತುಂಗಾ ಎಡ ನಾಲೆಗೆ ಬಿದ್ದ ಕಾರು, ಸಹಾಯಕ್ಕಾಗಿ ಕಿರುಚಿದರೂ ಆಗಲಿಲ್ಲ ಪ್ರಯೋಜನ

ಸಾವಿನ ಸರಣಿಯು ಮುಂದುವರಿದಿದ್ದು, ಗುರುವಾರ ಇಬ್ಬರನ್ನು ಕೊರೊನಾ ಬಲಿ ಪಡೆದಿದೆ. 485 ಮಂದಿಗೆ ಸೋಂಕು ದೃಢಪಟ್ಟಿದ್ದು, 548 ಜನರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ.
ಮನೆ ಆರೈಕೆ ಸಂಖ್ಯೆಯಲ್ಲಿ ಏರಿಕೆ
ಸಕ್ರಿಯ ಪ್ರಕರಣಗಳ ಸಂಖ್ಯೆ 2,554ಕ್ಕೆ ಏರಿಕೆಯಾಗಿದೆ. ಕೊರೊನಾ ರೋಗದ ಲಕ್ಷಣಗಳನ್ನು ಹೊಂದಿರುವ 2,355 ಮಂದಿಯ ಮಾದರಿಗಳನ್ನು ಸಂಗ್ರಹಿಸಿದ್ದು, ಹಳೆಯದ್ದೂ ಸೇರಿ 2,448 ರಿಪೋರ್ಟ್ ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 50 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 22, ಖಾಸಗಿ ಆಸ್ಪತ್ರೆಯಲ್ಲಿ 11, ಟ್ರಯಾಜ್ ನಲ್ಲಿ 10 ಹಾಗೂ ಮನೆ ಆರೈಕೆಯಲ್ಲಿ 2,554 ಸೋಂಕಿತರಿದ್ದಾರೆ.

https://www.suddikanaja.com/2021/06/04/avoid-un-necessary-ct-scan-to-covid-patient/

error: Content is protected !!