ಶಿವಮೊಗ್ಗದಲ್ಲಿ 144 ಜಾರಿ, ಎಷ್ಟು ದಿನ ಇರಲಿದೆ ನಿಷೇಧಾಜ್ಞೆ

 

 

ಸುದ್ದಿ ಕಣಜ.ಕಾಂ | CITY | 144 SECTION
ಶಿವಮೊಗ್ಗ: ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಗರದಲ್ಲಿ ಕಲಂ 144 ಅಡಿ ನಿಷೇಧಾಜ್ಞೆ ಹೇರಿ ಪೊಲೀಸ್ ಇಲಾಖೆ ಆದೇಶಿಸಿದೆ.

READ | ಹಿಜಾಬ್ ವಿವಾದ, ಶಿವಮೊಗ್ಗದಲ್ಲಿ ಲಾಠಿ ಚಾರ್ಜ್, ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ, ಸ್ಥಳದಲ್ಲೇ ಬೀಡು ಬಿಟ್ಟ ಡಿಸಿ, ಎಸ್‍ಪಿ

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಬಗ್ಗೆ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಹಾಗೂ ಶಿವಮೊಗ್ಗ ನಗರದಾದ್ಯಂತ ಮಂಗಳವಾರ ನಡೆದ ಅಹಿತಕರ ಘಟನೆಗಳನ್ನು ಮನಗಂಡು ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ.
ಎರಡು ದಿನ ನಿಷೇಧಾಜ್ಞೆ ಜಾರಿ
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆಬ್ರವರಿ 8 ಮತ್ತು 9ರಂದು 2 ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.

error: Content is protected !!