ರೈಲ್ವೆ ಟರ್ಮಿನಲ್’ಗೆ ಹೆಚ್ಚುವರಿ ಹನ್ನೊಂದೂವರೆ ಎಕರೆ ಜಮೀನು ಮಂಜೂರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಹೆಚ್ಚುವರಿಯಾಗಿ ಹನ್ನೊಂದೂವರೆ ಎಕರೆ ಜಮೀನನ್ನು ರಾಜ್ಯ ಸರ್ಕಾರ ಉಚಿತವಾಗಿ ರೈಲ್ವೆ ಇಲಾಖೆಗೆ ಮಂಜೂರು ಮಾಡುತ್ತಿದೆ.
ಟರ್ಮಿನಲ್ ಸ್ಥಾಪನೆಗೆ ಲಭ್ಯವಿರುವ ಭೂಮಿ ಕಡಿಮೆ ಆಗುವುದರಿಂದ ಈ ವಿಚಾರವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ರಾಜ್ಯ ಸರ್ಕಾರದ ಗಮನಕ್ಕೆ ಇದನ್ನು ತಂದಿದ್ದರು. ಇದನ್ನು ಮನಗಂಡು ಅಗತ್ಯವಿರುವ ಹನ್ನೊಂದೂವರೆ ಎಕರೆ ಭೂಮಿಯನ್ನು ಒದಗಿಸಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ 9.80 ಕೋಟಿ ರೂ. ಅನುದಾನ ನೀಡಿದೆ ಎಂದು ಸಂಸದ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಭಾಗಕ್ಕೆ ರೈಲ್ವೆ ಕೋಚಿಂಗ್ ಡಿಪೋ ಅಗತ್ಯತೆ ಮನಗಂಡು ಕೇಂದ್ರ ಸರ್ಕಾರ ಶಿವಮೊಗ್ಗ ಸಮೀಪ ಕೋಟೆಗಂಗೂರಿಗೆ 2019-20ರ ಕೇಂದ್ರ ಮುಂಗಡ ಪತ್ರದಲ್ಲಿ ಕೋಚಿಂಗ್ ಡಿಪೋ ಮಂಜೂರು ಮಾಡಿದೆ. ಈ ಕೋಚಿಂಗ್ ಡಿಪೋ ಎರಡು ಭಾಗಗಳದ್ದಾಗಿದ್ದು, ಒಂದರಲ್ಲಿ 62 ಕೋಟಿ ರೂ. ವೆಚ್ಚದಲ್ಲಿ ವೆಚ್ಚದಲ್ಲಿ ಕೋಚಿಂಗ್ ಡಿಪೋ ಮತ್ತೊಂದು ಭಾಗ ರೈಲ್ವೆ ಸ್ಟೆಷನ್ ನಿರ್ಮಾಣ ಮಾಡಲಿದೆ. ಅದರ ಮಂಜೂರಾತಿಯನ್ನು ರೈಲ್ವೆ ಬೋರ್ಡ್ ಕೆಲವೇ ದಿನಗಳಲ್ಲಿ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಎರಡು ಹಂತದಲ್ಲಿ ಕಾಮಗಾರಿ: ಮೊದಲನೆ ಭಾಗದ 62 ಕೋಟಿ ರೂ. ವೆಚ್ಚದ ಮೊದಲ ಭಾಗವಾಗಿ 6 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯ ಪ್ರಾರಂಭಿಕ ಹಂತದ ಮಣ್ಣು ಸಮತಟ್ಟು ಮಾಡುವ ಕಾಮಗಾರಿಯ ಬಿಡ್ಡಿಂಗ್ ಟೆಂಡರನ್ನು ರೈಲ್ವೆ ಇಲಾಖೆ ಕರೆದಿದ್ದು ನ.26 ರಿಂದ ಬಿಡ್ಡಿಂಗ್ ಪ್ರಾರಂಭವಾಗಲಿದ್ದು, ಡಿಸೆಂಬರ್ 10 ಕ್ಕೆ ಬಿಡ್ಡಿಂಗ್ ಮುಕ್ತಾಯವಾಗಲಿದೆ. 2021ರ ಜನವರಿ 15ಕ್ಕೆ ಟೆಂಡರ್ ಅಂತಿಮಗೊಳ್ಳಲಿದ್ದು, ಕಾಮಗಾರಿಯನ್ನು ಯಾವ ಏಜೆನ್ಸಿಗೆ ವಹಿಸಬೇಕೆಂಬುದು ಅಂತಿಮಗೊಳ್ಳಲಿದೆ ಎಂದು ತಿಳಿಸಿದ್ದಾರೆ.
12 ತಿಂಗಳ ಗಡುವು: 12 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್‌ದಾರರಿಗೆ ಗಡುವು ನೀಡಲಾಗಿದೆ. ಈ ಕಾಮಗಾರಿ ನಂತರದಲ್ಲಿ ಉಳಿಕೆಯ ಅಂದಾಜು 60 ಕೋಟಿ ಮೊತ್ತದ ಕಾಮಗಾರಿಗಳ ಅನುಷ್ಠಾನಕ್ಕೆ ಟೆಂಡರ್ ಕರೆಯಲು ರೈಲ್ವೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರಡಿ, ರೈಲ್ವೆ ಪಿಟ್ ಲೈನ್, ಸ್ಟೇಬಲ್ ಲೈನ್, ಮೂರು ಲೈನ್‌ಗಳ ಕ್ರಾಸಿಂಗ್ ಸ್ಟೆಷನ್ ಇತ್ಯಾದಿ ಟರ್ಮಿನಲ್ ಕೋಚ್‌ಗೆ ಅಗತ್ಯವಿರುವ ಕಾಮಗಾರಿಗಳನ್ನು ಒಳಗೊಂಡAತಹ ಟೆಂಡರ್ ಅನ್ನು ಮಾರ್ಚ್ 2021ರೊಳಗೆ ಅಂತ್ಯಗೊಳಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!