ಶಿವಮೊಗ್ಗದಲ್ಲಿ ನಾಳೆಯೂ ಮುಂದುವರಿಯಲಿದೆಯೇ ನಿಷೇಧಾಜ್ಞೆ?

 

 

ಸುದ್ದಿ ಕಣಜ.ಕಾಂ | CITY | SECTION 144
ಶಿವಮೊಗ್ಗ: ನಗರದಲ್ಲಿ ಗಲಾಟೆ, ಕಲ್ಲು ತೂರಾಟ ಹಾಗೂ ಶಾಂತಿ ಸುವ್ಯವಸ್ಥೆ ಕೈ ಮೀರಿದ್ದರಿಂದ ನಗರದಾದ್ಯಂತ ಫೆಬ್ರವರಿ 8 ಮತ್ತು 9ರಂದು ನಿಷೇಧಾಜ್ಞೆ ಹೇರಿ ಪೊಲೀಸ್ ಇಲಾಖೆ ಆದೇಶಿಸಿತ್ತು.

ಗಲಾಟೆ ಬಳಿಕ ಹೇಗಿದೆ ಶಿವಮೊಗ್ಗ ಸ್ಥಿತಿ, ವಿಡಿಯೋ ವೀಕ್ಷಿಸಿ (VIDEO REPORT)

READ | ಶಿವಮೊಗ್ಗದಲ್ಲಿ ಕಲ್ಲು ತೂರಾಟ ಕೇಸ್, 9 ಜನರನ್ನು ಅರೆಸ್ಟ್ ಮಾಡಿದ ಪೊಲೀಸ್

ಆದೇಶದ ಪ್ರಕಾರ, ಫೆ.9ರ ವರೆಗೆ ಮಾತ್ರ ಮಧ್ಯರಾತ್ರಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಆದರೆ, ಪೊಲೀಸ್ ಇಲಾಖೆ ಇದುವರೆಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನಗರದ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಒಂದುವೇಳೆ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಇದ್ದರೆ ಹೊಸ ಆದೇಶವನ್ನು ಗುರುವಾರ ಬೆಳಗ್ಗೆ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ. ಒಂದುವೇಳೆ, ನಿಷೇಧಾಜ್ಞೆ ಜಾರಿಯಾದರೂ ದಿನಸಿ ಅಂಗಡಿ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಶಾಲಾ, ಕಾಲೇಜುಗಳಿಗೆ ರಾಜ್ಯ ಸರ್ಕಾರದ ನಿರ್ದೇಶನ ಇರುವುದರಿಂದ ಗುರುವಾರವೂ ರಜೆ ಇರಲಿದೆ.

https://www.suddikanaja.com/2021/01/16/amit-shah-lay-the-foundation-stone-for-a-new-campus-of-rapid-action-force-in-bhadravathi/

error: Content is protected !!