ತುಂಗಭದ್ರಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಆತಂಕ

 

 

ಸುದ್ದಿ ಕಣಜ.ಕಾಂ | TALUK | CROCODILE SPOTTED 
ಶಿವಮೊಗ್ಗ: ತುಂಗಭದ್ರಾ ನದಿಯಲ್ಲಿ ಚೀಲೂರು ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಕೆಲ ದಿನಗಳ ಹಿಂದೆ ತುಂಗಭದ್ರಾ ಸಂಗಮ ಸ್ಥಳವಾದ ಕೂಡಲಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಚೀಲೂರು ಬಳಿಯೂ ಪ್ರತ್ಯಕ್ಷವಾಗಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮನೆ ಮಾಡಿದೆ.

READ | ಕೊಲೆ ಮಾಡಿ ಶವವನ್ನು ಶಿವಮೊಗ್ಗ ಎಪಿಎಂಸಿ ಬಳಿ ಹೂತಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅರಣ್ಯ ಇಲಾಖೆ ಕಾರ್ಯಾಚರಣೆ
ಈ ಹಿಂದೆ ಮೊಸಳೆ ಕಾಣಿಸಿಕೊಂಡಾಗ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿದ್ದರು. ಆದರೆ, ಮೊಸಳೆಗಳು ಸಿಕ್ಕಿರಲಿಲ್ಲ. ಆದರೆ, ಸ್ಥಳೀಯರ ಪ್ರಕಾರ ಅವರು ಮೂರ್ನಾಲ್ಕು ಮೊಸಳೆಗಳನ್ನು ಈ ಭಾಗದಲ್ಲಿ ಕಂಡಿದ್ದು, ಇದರ ಫೋಟೊಗಳು ಸಹ ವೈರಲ್ ಆಗಿವೆ. ಇದೇ ಮಾರ್ಗವಾಗಿ ತೆಪ್ಪದ ಮೂಲಕ ಸಾಸ್ವೆಹಳ್ಳಿಗೆ ಜನರು ಹೋಗುವುದರಿಂದ ಇನ್ನಷ್ಟು ಭೀತಿಗೆ ಕಾರಣವಾಗಿದೆ.

error: Content is protected !!