ಸುದ್ದಿ ಕಣಜ.ಕಾಂ
ಶಿವಮೊಗ್ಗ: ಏಳು ತಿಂಗಳ ರುದ್ರನರ್ತನದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಪ್ರಭಾವ ಇಳಿಮುಖವಾಗಿದೆ. ಮಂಗಳವಾರ ಎಂಟು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 23 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನ ಮೃತಪಟ್ಟಿದ್ದಾರೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 48 ಜನ ಚಿಕಿತ್ಸೆ ಪಡೆಯುತ್ತಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ 8 ಮತ್ತು ಮನೆ ಆರೈಕೆಯಲ್ಲಿ 64 ಜನರಿದ್ದಾರೆ. ಟ್ರಿಯೇಜ್ ಆಸ್ಪತ್ರೆಯಲ್ಲಿ ಸಂಖ್ಯೆ ಶೂನ್ಯಕ್ಕೆ ತಲುಪಿದೆ.
ಮಂಗಳವಾರ 2658 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದು, 2406 ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗ 3, ಭದ್ರಾವತಿ 3, ಶಿಕಾರಿಪುರ 0, ತೀರ್ಥಹಳ್ಳಿ 1, ಸೊರಬ 0, ಸಾಗರ 0, ಹೊಸನಗರ 1 ಪ್ರಕರಣ ಪತ್ತೆಯಾಗಿದೆ.