ಶಿವಮೊಗ್ಗದಲ್ಲಿ 4 ದಿನಗಳ ಮೈಸೂರು ಸಿಲ್ಕ್ ಸೀರೆ ಪ್ರದರ್ಶನ, ಮಾರಾಟ, 400ಕ್ಕೂ ಅಧಿಕ ಡಿಸೈನ್, ಡಿಸ್ಕೌಂಟ್ ಲಭ್ಯ

 

 

ಸುದ್ದಿ ಕಣಜ.ಕಾಂ | DISTRICT | MYSURU SILK
ಶಿವಮೊಗ್ಗ: ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

READ | Today Gold, Silver Rate, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರ, ಬೆಳ್ಳಿ ಮತ್ತೆ ಅಗ್ಗ

ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಸೀರೆಗಳು ಇಲ್ಲಿ ಲಭ್ಯವಿದ್ದು, ಆರು ಸಾವಿರ ರೂಪಾಯಿಯಿಂದ ಒಂದೂವರೆ ಲಕ್ಷದವರೆಗೆ ಬೆಲೆಬಾಳುವ ಸೀರೆಗಳು ಲಭ್ಯ ಇವೆ. ಆಯೋಜಕರು ಹೇಳುವಂತೆ, ಒಟ್ಟು 400ಕ್ಕೂ ಅಧಿಕ ಡಿಸೈನ್ ಗಳು ತರಲಾಗಿದೆ. ಪ್ರದರ್ಶನ ಮತ್ತು ಮಾರಾಟಕ್ಕೆ ಶಿವಮೊಗ್ಗದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಸಲವೂ ಅÀದೇ ನಿರೀಕ್ಷೆ ಇದೆ ಎನ್ನುತ್ತಾರೆ ಆಯೋಜಕರು.

ಮೈಸೂರು ಸಿಲ್ಕ್ ಉತ್ಪನ್ನಗಳು ಐತಿಹಾಸಿಕ, ಪಾರಂಪರಿಕ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಪ್ರತಿಷ್ಠಿತ ಉತ್ಪನ್ನವಾಗಿದ್ದು, ಇದರ ಬಳಕೆಯಿಂದಾಗಿ ವ್ಯಕ್ತಿಯ ಘನತೆ ಮತ್ತು ಗೌರವ ಹೆಚ್ಚಲಿದೆ.
– ಜಿ.ಪಿ.ವಿಜಯ್‍ಕುಮಾರ್, ಸಂಸ್ಥೆಯ ನಿರ್ದೇಶಕ

ಮೈಸೂರು ಸಿಲ್ಕ್ ನಾಡಿನ ಶ್ರೀಮಂತಿಕೆಯ ಪ್ರತೀಕ
ಜಗತ್ತಿನ ಜನಮನ್ನಣೆ ಪಡೆದ ಮೈಸೂರು ಸಿಲ್ಕ್ ಉತ್ಪನ್ನಗಳು ನಾಡಿನ ಶ್ರೀಮಂತಿಕೆಯ ಪ್ರತೀಕವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಣಮಟ್ಟದ ಉತ್ಪನ್ನಗಳಿಂದಲೇ ಪ್ರಸಿದ್ದಿ ಪಡೆದಿರುವ ಮೈಸೂರು ಸಿಲ್ಕ್ ಸರ್ಕಾರದ ಅಧೀನ ಮತ್ತು ಅಧಿಕೃತ ಸಂಸ್ಥೆ ಎನಿಸಿದೆ. ಬೇಡಿಕೆಗೆ ತಕ್ಕಂತೆ, ಆದುನಿಕ ಕಾಲಮಾನಕ್ಕೆ ಅನುಗುಣವಾಗಿ ಸಾಂಪ್ರದಾಯಿಕ ಹಾಗೂ ಆಧುನಿಕತೆಯಿಂದ ಕೂಡಿರುವ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವಲ್ಲಿ ಸಂಸ್ಥೆ ಸಮರ್ಥವಾಗಿದೆ ಎಂದರು.

READ | ಸಕ್ಸಸ್ ಸ್ಟೋರಿ, ಉದ್ಯೋಗ ಕಸಿದುಕೊಂಡ ಲಾಕ್‍ಡೌನ್, ಬದುಕು ನೀಡಿದ ‘ಕುರಿ ಸಾಕಾಣಿಕೆ’

ವಾರ್ಷಿಕ 500 ಕೋಟಿ ಆರ್ಥಿಕ ವಹಿವಾಟು
ಕೆ.ಎಸ್.ಐ.ಸಿ. ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ಭಾನುಪ್ರಕಾಶ್ ಮಾತನಾಡಿ, ಸಂಸ್ಥೆಯ ವತಿಯಿಂದ ತಜ್ಞ ನೇಕಾರರಿಂದ ಅತ್ಯುತ್ತಮ ಗುಣಮಟ್ಟದ ಒಂದು ಲಕ್ಷಕ್ಕಿಂತ ಹೆಚ್ಚಿನ ಸೀರೆಗಳನ್ನು ಉತ್ಪಾದಿಸುತ್ತಿದೆ. ಇದರಿಂದಾಗಿ ವಾರ್ಷಿಕವಾಗಿ 500ಕೋಟಿ ರೂ.ಗಳ ಆರ್ಥಿಕ ವಹಿವಾಟನ್ನು ಹೊಂದಿರುವುದು ಹರ್ಷದ ಸಂಗತಿಯಾಗಿದೆ.
ಮೈಸೂರು ಸಿಲ್ಕ್ ಸೀರೆಗಳು ಇತರೆ ರೇಷ್ಮೆ ವಸ್ತ್ರಗಳಿಗಿಂತ ಭಿನ್ನವಾಗಿವೆ. ಈ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ದೊರೆಯುವ ಮತ್ತು ಬೇಡಿಕೆಯಲ್ಲಿರುವ ರೇಷ್ಮೆ ಸೀರೆಗಳಾಗಿವೆ. ವಿಶೇಷವಾಗಿ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬ ಹರಿದಿನ ಗಳ ಸಂದರ್ಭದಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯ ಸೀರೆಗಳಾಗಿವೆ ಎಂದರು.

https://www.suddikanaja.com/2021/03/31/ks-eshwarappa-wrote-latter-against-yadiyurappa-to-bjp-leaders/

error: Content is protected !!