ಶಿವಮೊಗ್ಗದಲ್ಲಿ 105ರ ಗಡಿ ದಾಟಿದ ಪೆಟ್ರೋಲ್ ರೇಟ್

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಭಾರೀ ಏರಿಕೆಯಾಗಿದೆ. ಶನಿವಾರವೊಂದೇ ದಿನ ಪೆಟ್ರೋಲ್ 0.77 ಪೈಸೆ ಹಾಗೂ ಡಿಸೇಲ್ 0.72 ಪೈಸೆಯಷ್ಟು ಹೆಚ್ಚಳವಾಗಿದೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಶನಿವಾರ ಪ್ರತಿ ಲೀಟರ್ ಡಿಸೇಲ್ 89.38 ರೂಪಾಯಿ ಹಾಗೂ ಪೆಟ್ರೋಲ್ 105.40 ರೂ. ನಿಗದಿಯಾಗಿದೆ.

ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಮಾರ್ಚ್ 20 101.43 85.69
ಮಾರ್ಚ್ 21 102.23 86.42
ಮಾರ್ಚ್ 22 103.3 87.41
ಮಾರ್ಚ್ 23 103.78 87.87
ಮಾರ್ಚ್ 24 103.97 88.04
ಮಾರ್ಚ್ 25 104.63 88.66
ಮಾರ್ಚ್ 26 105.4 89.38

error: Content is protected !!