ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ, 3 ದಿನಗಳಿಂದ ನಿರಂತರ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯು ಕಳೆದ ಮೂರು ದಿನಗಳಿಂದ ಇಳಿಕೆಯಾಗುತ್ತಿದೆ. ಬುಧವಾರ 10 ಗ್ರಾಂ ಅಪರಂಜಿ ಬೆಲೆಯಲ್ಲಿ 120 ರೂಪಾಯಿ ಇಳಿಕೆಯಾಗಿದೆ.
ಮಾರ್ಚ್ 28 ಮತ್ತು 29ರಂದು ಕ್ರಮವಾಗಿ 280 ರೂ, 210 ರೂ. ಇಳಿಕೆಯಾಗಿತ್ತು. ಇಂದು (ಪ್ರತಿ 10 ಗ್ರಾಂ) 24 ಕ್ಯಾರೆಟ್ 51,980 ರೂ. ಹಾಗೂ 22 ಕ್ಯಾರೆಟ್ ಗೆ 47,650 ಇದೆ. ಮಾರ್ಚ್ 25ರ ಬಳಿಕ 26, 27ರಂದು ಚಿನ್ನದ ಬೆಲೆಯು ಸ್ಥಿರವಾಗಿತ್ತು. ನಂತರ, ಇಳಿಕೆಯಾಗಿದೆ.
ಬೆಳ್ಳಿಯ ಬೆಲೆ ಇಂದು ಸ್ಥಿರ
ಕಳೆದ ಎರಡು ದಿನಗಳಿಂದ ನಿರಂತರ ಇಳಿಕೆಯಾಗುತ್ತಿದ್ದ ಬೆಳ್ಳಿಯ ಬೆಲೆಯು ಇಂದು ಸ್ಥಿರವಾಗಿದೆ. ಕೆಜಿಗೆ 72,100 ರೂ. ಇದೆ.

READ | ಚಿನ್ನ, ಬೆಳ್ಳಿ ಪ್ರಿಯರಿಗೆ ಶುಭ ಸುದ್ದಿ, ಕಳೆದೆರಡು ದಿನಗಳಿಂದ ಬೆಲೆಯಲ್ಲಿ ಭಾರಿ ಇಳಿಕೆ

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ(ಕೆಜಿ)
ಮಾರ್ಚ್ 25 48,200 52,590 73,800
ಮಾರ್ಚ್ 26 48,200 52,590 73,400
ಮಾರ್ಚ್ 27 48,200 52,590 73,400
ಮಾರ್ಚ್ 28 47,590 52,310 72,700
ಮಾರ್ಚ್ 29 47,750 52,100 72,100
ಮಾರ್ಚ್ 30 47,650 51,980 72,100

error: Content is protected !!