8ನೇ ತರಗತಿ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಸ್ವಯಂ ಉದ್ಯೋಗ ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಲೂಕಿನ ಹೊಳಲೂರಿನ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ `ಸೇಲ್ ಫೋನ್ ರೀಪೈರ್ ಮತ್ತು ಸರ್ವಿಸಿಂಗ್ ಮಲ್ಟಿಫೋನ್ ಸರ್ವಿಸಿಂಗ್ ತರಬೇತಿ’ 30 ದಿನಗಳ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ನಿರುದ್ಯೋಗ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಹತೆಗಳೇನು?
ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು 8ನೇ ತರಗತಿ ಉತ್ತೀರ್ಣರಾಗಿರಬೇಕು. ಉಚಿತ ತರಬೇತಿಯನ್ನು ಪಡೆದ ನಂತರ ಸ್ವ ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ವ್ಯವಸ್ಥೆ ಲಭ್ಯವಿರಲಿದೆ.
ಅಭ್ಯರ್ಥಿಯು ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಬಿ.ಪಿಎಲ್ ಕಾರ್ಡ್ ಹೊಂದಿರಬೇಕು. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಏಪ್ರಿಲ್ 25ರಿಂದ ಪ್ರಾರಂಭವಾಗಲಿದ್ದು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.
ಅರ್ಜಿಯನ್ನು ಇಲ್ಲಿಗೆ ಕಳುಹಿಸಿ
ಅಭ್ಯರ್ಥಿಗಳು ಹೆಸರು, ವಿಳಾಸ, ಮೊಬೈಲ್ ನಂಬರ್ ವಿದ್ಯಾರ್ಹತೆ ಮತ್ತು ವಯಸ್ಸಿನ ವಿವರಗಳೊಂದಿಗೆ
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು 577 216 (ಶಿವಮೊಗ್ಗ ತಾಲ್ಲೂಕು) ಇವರಿಗೆ ತಕ್ಷಣವೇ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8660062683, 9743429595, 9449371579, 9481955721 ಕರೆ ಮಾಡಿ. ಅಥವಾ cbrsetiholalur@gmail.com ಇಮೇಲ್ ಮಾಡಬಹುದು.

error: Content is protected !!