ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿಯಲ್ಲಿ ನೇಮಕಾತಿ, ಯಾರೆಲ್ಲ ಸಂದರ್ಶನದಲ್ಲಿ ಭಾಗವಹಿಸಬಹುದು

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION 
ಬೆಂಗಳೂರು: (KSRDPRU Recruitment 2022) ಗದಗದಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ಕೆ.ಎಸ್.ಆರ್.ಡಿ.ಪಿ.ಆರ್.ಯು-Karnataka State Rural Development and Panchayat Raj University)ದಲ್ಲಿ ಗುತ್ತಿಗೆ ಆಧಾರದ ಮೇಲೆ ಬೋಧಕ ಸಿಬ್ಬಂದಿ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತರು ಏಪ್ರಿಲ್ 19ರಂದು ಬೆಳಗ್ಗೆ 9.30 ಗಂಟೆಗೆ ನಡೆಯಲಿರುವ ಸಂದರ್ಶನದಲ್ಲಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ 582101 ಕರ್ನಾಟಕ ಇಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗತಕ್ಕದ್ದು.

JOBS FB Link

ವಿಶ್ವವಿದ್ಯಾಲಯದ ಹೆಸರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ(ಕೆ.ಎಸ್.ಆರ್.ಡಿ.ಪಿ.ಆರ್.ಯು)
ಹುದ್ದೆಗಳ ಸಂಖ್ಯೆ  ನಿರ್ದಿಷ್ಟಪಡಿಸಿಲ್ಲ
ಉದ್ಯೋಗದ ಸ್ಥಳ ಕರ್ನಾಟಕ (Karnataka)
ಹುದ್ದೆ ಹೆಸರು ಗೆಸ್ಟ್ ಫೆಕಲ್ಟಿ
ವೇತನ ಕೆ.ಎಸ್.ಆರ್.ಡಿ.ಪಿ.ಆರ್.ಯು ನಿಯಮ ಅನ್ವಯ
ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ 09/04/2022
ನೇರ ಸಂದರ್ಶನ 19/04/2022, ಬೆಳಗ್ಗೆ 9.30

ವಿದ್ಯಾರ್ಹತೆ

  • ಎಂಎಸ್.ಡಬ್ಲ್ಯು ಇನ್ ಕಮ್ಯೂನಿಟಿ ಡೆವಪಲಪ್ಮೆಂಟ್/ ಕಮ್ಯೂನಿಟಿ ಹೆಲ್ತ್- ಎಂಎಸ್.ಡಬ್ಲ್ಯು ಶೇ.55 ಅಂಕ ಪಡೆದು ತೇರ್ಗಡೆಯಾಗಿರಬೇಕು. ಪಿಎಚ್.ಡಿ, ಎನ್.ಇ.ಟಿ, ಕೆ-ಸೆಟ್ ಅರ್ಹತೆ ಪಡೆದಿರಬೇಕು. ಅಭ್ಯರ್ಥಿಗಳು 2ರಿಂದ 4 ವರ್ಷ ಬೋಧನೆ ಅನುಭವ ಪಡೆದಿರಬೇಕು.
  • ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತ್ (ಎಂಪಿಎಚ್)- ಎಂಪಿಎಚ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಶೇ.55 ಅಂಕ ಪಡೆದಿರಬೇಕು. ಪಿಎಚ್.ಡಿ, ಎನ್.ಇ.ಟಿ, ಕೆ-ಸೆಟ್ ಅರ್ಹತೆ ಪಡೆದಿರಬೇಕು.
  • ಇಂಗ್ಲಿಷ್ ಭಾಷೆ- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಶೇ.55 ಅಂಕ ಗಳಿಸಿರಬೇಕು. ಪಿಎಚ್.ಡಿ, ಎನ್.ಇ.ಟಿ, ಕೆ-ಸೆಟ್ ಅರ್ಹತೆ ಪಡೆದಿರಬೇಕು.

NOTIFICATION

OFFICIAL WEBSITE

Email

READ | ಕೆಪಿಎಸ್‍ಸಿ ಆಯ್ಕೆ ಪಟ್ಟಿ ಪ್ರಕಟ, ಅರ್ಹರಿಗೆ ಸಂದರ್ಶನ

error: Content is protected !!