ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ವ್ಯವಹಾರಕ್ಕೆ ಶಿಫ್ಟ್ ಆಗಲು ಒಕ್ಕೂಟ ಸಲಹೆ

 

 

ಸುದ್ದಿ ಕಣಜ.ಕಾಂ | TALUK | STREET VENDORS 
ಭದ್ರಾವತಿ: ಎಲ್ಲ ಬೀದಿ ಬದಿ ವ್ಯಾಪಾರಿಗಳು ಡಿಜಿಟಲ್ ವ್ಯವಹಾರಕ್ಕೆ ಶಿಫ್ಟ್ ಆಗುವಂತೆ ಶಿವಮೊಗ್ಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟದ ಜಿಲ್ಲಾಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಸಲಹೆ ನೀಡಿದರು.
ಭದ್ರಾವತಿಯ ಬೀದಿ ಬದಿಯ ವ್ಯಾಪಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದ ಅವರು, ಗೂಗಲ್ ಪೇ, ಪೋನ್ ಪೇ, ಪೇ ಟೀಎಂ, ಡಿಜಿಟಲ್ ವ್ಯಾಪಾರ ಆರಂಭಿಸುವಂತೆ ಹೇಳಿದರು.
ಒಂದುವೇಳೆ, ಯಾರಿಗಾದರೂ ಪೋನ್ ಪೇ ಕ್ಯೂ ಆರ್ ಕೋಡ್ ಪಡೆಯದಿದ್ದರೆ ತಮ್ಮನ್ನು ಸಂಪರ್ಕಿಸಿದರೆ ಅದಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದರು.

READ | 4 ದಿನ ಶಿವಮೊಗ್ಗದಲ್ಲೇ ಇರಲಿದ್ದಾರೆ ಬಿ.ಎಸ್.ಯಡಿಯೂರಪ್ಪ, ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?

ಎಲ್ಲರೂ ಸೇರಿ ಸಾಲ ಪಡೆಯಿರಿ
ಅಹವಾಲುಗಳನ್ನು ಆಲಿಸಿದ ಗಾಮನಗಟ್ಟಿ ಅವರ ಮುಂದೆ ಬೀದಿ ಬದಿ ವ್ಯಾಪಾರಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. `ಕೆಲವರು ತಮ್ಮಲ್ಲಿ ಗುರುತಿನ ಚೀಟಿ ಇಲ್ಲವೆಂದರೆ, ಇನ್ನೂ ಕೆಲವರು ಪಿಎಂ ಸ್ವ ನಿಧಿ ಸಾಲ ದೊರೆತ್ತಿಲ್ಲ. ಬ್ಯಾಂಕ್ ಗಳಿಗೆ ಹೋಗಿ ಸುಸ್ತಾಗಿ ಹೋಗಿದ್ದೇವೆ. ಇನ್ನೂ ಕೆಲವರು ಹತ್ತು ಸಾವಿರ ರೂಪಾಯಿ ಪಡೆದಿರುವೆವೂ ಇಪ್ಪತ್ತು ಸಾವಿರ ರೂಪಾಯಿ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಅಲೆದಾಡುತ್ತಿರುವೆವು’ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಚನ್ನವೀರಪ್ಪ, ಪಿಎಂ ಸ್ವ ನಿಧಿ ಸಾಲದ ಯೋಜನೆ ಮಾರ್ಚ್ 31ಕ್ಕೆ ಕೊನೆಯಾಗಿತ್ತು. ನಂತರ ಆರು ತಿಂಗಳವರೆಗೆ ವಿಸ್ತರಿಸಲಾಯಿತು. ಈಗ 2024ರ ವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಬಹಳಷ್ಟು ಜನ 10,000 ಸಾಲ ಪಡೆದು ಮನ್ನಾ ಎಂದುಕೊಂಡಿರುವರು. ಇದು ಮನ್ನಾ ಅಲ್ಲ, ತಿಂಗಳ ಕೊನೆಯಲ್ಲಿ ನಿಗದಿ ಪಡಿಸಿದ ಕಂತುಗಳಲ್ಲಿ ಕಟ್ಟಬೇಕು. ಇಲ್ಲದಿದ್ದರೆ ಡಿಫಾಲ್ಟ್ ಆದರೆ ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ರೀತಿಯ ಸಾಲ ಬ್ಯಾಂಕ್ ಗಳಿಂದ ದೊರೆಯುವುದಿಲ್ಲ ಎಂದರು.
ಬ್ಯಾಂಕ್ ಗಳು ಸಾಲ ಕೊಡುವುದಿಲ್ಲ ಎಂದು ಚಿಂತಿಸಬೇಡಿ ನೀವೆ 15 ಜನರ ಗುಂಪೊಂದು ರಚನೆ ಮಾಡಿ, ನೂರು ರೂಪಾಯಿ ತಿಂಗಳಿಗೆ ಉಳಿತಾಯ ಮಾಡಿ, ಅದರಲ್ಲೇ ಸಾಲ ಪಡೆಯಿರಿ, ಬರುವ ಬಡ್ಡಿಯ ನೀವುಗಳೆ ಹಂಚಿಕೊಳ್ಳಿ. ಬ್ಯಾಂಕ್ ಗಳ ಅವಶ್ಯಕತೆ ಬೀಳುವುದಿಲ್ಲ. ಈ ಉಳಿತಾಯ ಸ್ವಸಹಾಯ ಸಂಘಕ್ಕೆ ಸರ್ಕಾರ ಸಹಾಯ ಧನ ನೀಡುತ್ತಿದೆ. ಇಲ್ಲಿಯ ನಗರಸಭೆಯ ಅಧಿಕಾರಿಗಳನ್ನು ಭೇಟಿ ಮಾಡಿ ಗುಂಪುಗಳ ರಚನೆ ಬಗ್ಗೆ ತಿಳಿಸುವೆ ಎಂದು ತಿಳಿಸಿದರು.

READ | ಇ-ಶ್ರಮ್ ಕಾರ್ಡ್ ಪಡೆಯುವುದು ಹೇಗೆ, ಯಾರೆಲ್ಲ ಸೌಲಭ್ಯಕ್ಕೆ ಅರ್ಹರು, ಇದರ ಪ್ರಯೋಜನವೇನು?

ನಾಲ್ಕನೇ ಅಲೆಯ ಬಗ್ಗೆ ಇರಲಿ ಎಚ್ಚರ
ರಾಜ್ಯ ಸರ್ಕಾರ ಕೊವೀಡ್ 4ನೇ ಆಲೆಯ ಮುಂಜಾಗ್ರತಾ ಎಚ್ಚರಿಕೆ ಸಂದೇಶ ನೀಡುತ್ತಿದೆ. ಎಲ್ಲರೂ ಪಾಲನೆ ಮಾಡಿ, ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ. ಅಡುಗೆ ಮಾಡುವವರೂ ಏಪ್ರಾನ್ ಬಳಸಿ, ನೀವುಗಳು ಸಾರ್ವಜನಿಕರ ಮಧ್ಯೆ ಇರುವವರು ಮೊದಲು ಕೊವೀಡ್ ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದರು.

error: Content is protected !!