ಪಿಎಸ್‍ಐ ನೇಮಕಾತಿ ಹಗರಣ, ಪ್ರಿಯಾಂಕ್ ಖರ್ಗೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ

Araga jnanendra

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಪಿಎಸ್‍ಐ ನೇಮಕಾತಿ (PSI RECRUITMENT) ಪರೀಕ್ಷೆಯಲ್ಲಿ ನಡೆದಿರುವ ಹಗರಣ  (SCAM) ಸಂಬಂಧ ಕೆಲವರನ್ನು ವಶಪಡಿಸಿಕೊಳ್ಳಲಾಗಿದೆ. ಸಿಐಡಿ ವಿಶೇಷವಾಗಿ ತನಿಖೆ ನಡೆಸುತ್ತಿದೆ. ಇದರ ನಡುವೆ ಇಡಿ ಅಧಿಕಾರಿಗಳು ಕಲಬುರಗಿಯಲ್ಲಿ ಶುಕ್ರವಾರ 1 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

READ | 10 ವಾರ್ಡ್‍ಗಳಿಗೆ ನುಗ್ಗಿದ ನೀರು, ಅಪಾರ ಹಾನಿ, ನೆರೆ ಪೀಡಿತ ಸ್ಥಳಕ್ಕೆ ಸಂಸದರ ಭೇಟಿ

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್.ಐ ನೇಮಕಾತಿ ಸಂಬಂಧ ಮರು ಪರೀಕ್ಷೆ ದಿನಾಂಕವನ್ನು ಇದುವರೆಗೆ ನಿಗದಿಪಡಿಸಿಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ 2.19 ಕೋಟಿ ರೂಪಾಯಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಯಾರೇ ಪ್ರಕರಣದಲ್ಲಿ ಶಾಮೀಲು ಆಗಿದ್ದರು ಮುಲಾಜಿಲ್ಲದೇ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಫಾಸ್ಟ್ ಟ್ರ್ಯಾಕ್ ಕೋರ್ಟ್ ಬಗ್ಗೆ ತನಿಖೆ ಮುಗಿದ ಬಳಿಕ ಯೋಚನೆ ಮಾಡಲಾಗುವುದು ಎಂದು ಹೇಳಿದರು.
ತನಿಖೆ ದಾರಿತಪ್ಪಿಸುವುದೇ ಪ್ರಿಯಾಂಕ್ ಖರ್ಗೆ ಉದ್ದೇಶ  
ಶಾಸಕ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗಳ ಮುಂದೆ ಹಿರೋ ಆಗಲು ಹೋಗಿ ಹಗರಣದ ಬಗ್ಗೆ ಸಾಕ್ಷ್ಯಾಧಾರ ನೀಡುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ತನಿಖೆ ವೇಳೆ ಸಾಕ್ಷ್ಯಾಧಾರ ನೀಡುವಂತೆ ಕೇಳಿದ್ದಕ್ಕೆ ಬೆನ್ನು ತೋರಿಸುತ್ತಿದ್ದಾರೆ. ಪ್ರಕರಣದ ತನಿಖೆ ಹಳಿ ತಪ್ಪಿಸುವುದೇ ಖರ್ಗೆಯವರ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಸಿಎಂ ದೆಹಲಿ ಭೇಟಿಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ನೀಡುವುದರ ಹಿಂದಿನ ಉದ್ದೇಶ ಸಂಪುಟ ವಿಸ್ತರಣೆ ಅಲ್ಲ ಎಂದು ಸ್ಪಷ್ಟಪಡಿಸಿದರು.

https://suddikanaja.com/2022/05/06/nsui-protest-against-psi-scam-at-karnataka/

Leave a Reply

Your email address will not be published. Required fields are marked *

error: Content is protected !!