ಎಮ್ಮೆ ಕದ್ದಿದ್ದಕ್ಕೆ ಯುದ್ಧವೇ ನಡೆದಿತ್ತು, ಶಿಲ್ಪದಲ್ಲಿ ಪತ್ತೆಯಾಯ್ತು ಹೊಸ ವಿಚಾರ, ಏನದು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಗುಡ್ಡದ ಅರಿಕೆರೆ ಗ್ರಾಮದಲ್ಲಿ ಎಮ್ಮೆಗಳ ಕಳ್ಳತನ ಮಾಡುವಾಗ ಶತ್ರುಗಳ ವಿರುದ್ಧ ಹೋರಾಡಿ ಬೆಟ್ಟುಗ ಎಂಬಾತ ಮರಣ ಹೊಂದಿದ್ದ. ಗೋವಿಂದ ಗಾವುಂಡ ತುರುಗೋಳು ವೀರಗಲ್ಲನ್ನು ನಿಲ್ಲಿಸಿದ್ದಾನೆ. ಇದರ ಮೂಲಕ ತುರುಗೋಳ್ ಎಂದರೆ ಕೇವಲ ಗೋವು(ಹಸು) ಮಾತ್ರವಲ್ಲ ಎಮ್ಮೆ ಕೂಡ ಎಂಬುವುದು ಶಿಲ್ಪಗಳಿಂದ ಸಾಬೀತು ಆಗಿದೆ.
WhatsApp Image 2020 12 06 at 12.42.13 PMಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಶಿಲ್ಪಗಳು ಸಿಕ್ಕಿವೆ. ಅವುಗಳಲ್ಲಿ ಹಸುಗಳ ಚಿತ್ರವಿದೆ. ಆದರೆ, ಇದೇ ಮೊದಲು ಎಮ್ಮೆಗಳಿರುವುದು ಕಂಡುಬಂದಿದೆ.
ಕರ್ನಾಟದಲ್ಲೇ ವಿರಳ: ಎಮ್ಮೆಯ ಶಿಲ್ಪಗಳಿರುವ ವೀರಗಲ್ಲು ಕರ್ನಾಟಕದಲ್ಲಿ ಅತಿ ವಿರಳವಾಗಿ ಕಂಡುಬಂದಿವೆ.
ಗುಡ್ಡದ ಅರಿಕೆರೆ ಗ್ರಾಮದ ಯಶೋದಮ್ಮ ಎಂಬುವವರ ಜಮೀನಿನಲ್ಲಿ ಈ ತುರುಗೋಳು ವೀರಗಲ್ಲು ಶಿಲ್ಪ ಸಿಕ್ಕಿದೆ. 262 ಸೆಂ.ಮೀಟರ್ ಉದ್ದ, 95 ಸೆಂ. ಮೀಟರ್ ಅಗಲಿವಿದೆ. ಇದು ಕ್ರಿ.ಶ. 963ರ ಕ್ರಿ.ಶ. 10ನೇ ಶತಮಾನದ ರಾಷ್ಟçಕೂಟರ ಕಾಳದ ಕನ್ನರದೇವನ ಕಾಲದ್ದಾಗಿದ್ದು, ಇದನ್ನು ಬಿ.ಎಲ್.ರೈಸ್ ಅವರು ದಾಖಲಿಸಿದ್ದಾರೆ.
ಪಟ್ಟಿಕೆಯಲ್ಲಿ ಏನಿದೆ?

  • ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ವೀರನಾದ ಅರಿಗೆರೆಯ ನಾಡಗಾವುಂಡನ ತಮ್ಮ ಬೆಟ್ಟುಗನ ಹಿಂದೆ ಐದು ಎಮ್ಮೆಗಳ ಶಿಲ್ಪಿವಿದೆ. ಈ ವೀರನು ಬಿಲ್ಲು ಬಾಣಗಳನ್ನು ಹಿಡಿದು ಆರು ಜನ ಶತ್ರುಗಳ ವಿರುದ್ಧ ಹೋರಾಡುತ್ತಿರುವುದು ಕಂಡುಬರುತ್ತದೆ.
  • ಎರಡನೇ ಪಟ್ಟಿಕೆಯಲ್ಲಿ ಬೆಟ್ಟುಗನು ಮರಣ ಹೊಂದಿದ್ದು, ಅಪ್ಸರೆಯರು ಸಂಗೀತ ವಾದ್ಯಗಳೊಂದಿಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ.
  • ಮೂರನೇ ಪಟ್ಟಿಕೆಯಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವುದು ಇವನ ಪಕ್ಕದಲ್ಲಿ ಅಪ್ಸೆರೆಯರು ಹಾಗೂ ಚಾಮರನ ಧಾರಣಿಯರಿದ್ದಾರೆ.
  • ನಾಲ್ಕನೆ ಪಟ್ಟಿಕೆಯಲ್ಲಿ ಶಿವಲಿಂಗ ಮತ್ತು ಸೂರ್ಯ ಚಂದ್ರರಿದ್ದಾರೆ.

ಪತ್ತೆ ಹಚ್ಚಿದ್ದು: ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ.ಪೂರ್ಣಿಮಾ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಶಿಲ್ಪ ಕಂಡುಬಂದಿದೆ. ಗುರುತಿಸುವಲ್ಲಿ ಡಾ.ಜಗದೀಶ್, ಡಾ.ಶೇಷಶಾಸ್ತ್ರೀ, ಡಾ.ಪರಶಿವಮೂರ್ತಿ, ರಮೇಶ್ ಹಿರೇಜಂಬೂರು, ಮುರುಳಿಕೃಷ್ಣ ಹಾಗೂ ಗ್ರಾಮಸ್ಥ ಬಾಬಣ್ಣ ಸಹಕರಿಸಿದ್ದಾರೆ.

ಎಮ್ಮೆಯ ವೀರಗಲ್ಲುಗಳಿರುವ ವೀರಗಲ್ಲುಗಳು ಕರ್ನಾಟಕದಲ್ಲಿ ಅತಿ ವಿರಳ. ಇಲ್ಲಿಯವರೆಗೆ ಎರಡ್ಮೂರಷ್ಟೆ ಕಂಡುಬಂದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳನ್ನೇ ಎಲ್ಲ ತುರುಗೋಳು ವೀರಗಲ್ಲಿನಲ್ಲಿ ಚಿತ್ರಿಸಲಾಗಿದೆ. ಬಹುಶಃ ಶಿವಮೊಗ್ಗದಲ್ಲಿಯೇ ದೊರೆತಿರುವ ಪ್ರಥಮ ಎಮ್ಮೆಯ ಶಿಲ್ಪಗಳಿರುವ ತುರುಗೋಳ್ ವೀರಗಲ್ಲು ಇದಾಗಿದೆ.
– ಆರ್.ಶೇಜೇಶ್ವರ, ಸಹಾಯಕ ನಿರ್ದೇಶಕ, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಶಿವಪ್ಪನಾಯಕ ಅರಮನೆ, ಶಿವಮೊಗ್ಗ

error: Content is protected !!