ರೈಲ್ವೆ ಗೇಟ್ ಬಳಿ ಗೇಟ್ ಮ್ಯಾನ್ ಇಲ್ಲದಿದ್ದರೆ ಕೂಡಲೇ ದೂರು ನೀಡಿ

Railway

 

 

ಸುದ್ದಿ ಕಣಜ.ಕಾಂ | DISTRICT | RAILWAY CROSSING DAY
ಶಿವಮೊಗ್ಗ: ರೈಲ್ವೆ ಗೇಟ್ ಬಳಿ ಗೇಟ್ ಮ್ಯಾನ್ ಇಲ್ಲದಿದ್ದರೆ ಸಾರ್ವಜನಿಕರು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬೇಕು ಎಂದು ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ನೀರಜ್ ಭಾಫ್ನಾ ತಿಳಿಸಿದರು.
ನೈರುತ್ಯ ರೈಲ್ವೆ ಮೈಸೂರು ವಿಭಾಗ ವತಿಯಿಂದ ಜೂನ್ 9ರಂದು ಇರುವ ಅಂತರರಾಷ್ಟ್ರೀಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಾಗೃತ ದಿನ (RAILWAY CROSSING DAY)ದ ಅಂಗವಾಗಿ ಶುಕ್ರವಾರ ನಗರದ ಹೊಳೆ ಬಸ್ ಸ್ಟಾಪ್ ಹತ್ತಿರವಿರುವ ರೈಲ್ವೆ ಗೇಟ್ ನಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

READ | ಸಿಇಟಿ ಪರೀಕ್ಷೆ ಎದುರಿಸುವುದಕ್ಕೆ ಅಳುಕು ಇದೆಯೇ, ಹಾಗಾದರೆ, ಈ ಕಾರ್ಯಾಗಾರಕ್ಕೆ ಹಾಜರಾಗಿ

ರೈಲ್ವೆ ಗೇಟ್ ದಾಟುವಾಗ ಅವಸರ ಮಾಡಿಕೊಂಡು ಅಪಘಾತಗಳಿಗೆ ಅವಕಾಶ ನೀಡಬಾರದು. ನಿಧಾನವಾಗಿ ಲೆವೆಲ್ ಕ್ರಾಸಿಂಗ್ ಮಾಡಬೇಕು ಎಂದರು.
ಆರ್.ಪಿ.ಎಫ್ ನಿರೀಕ್ಷಕ ಬಿ.ಎನ್ ಕುಬೇರಪ್ಪ ಮಾತನಾಡಿ, ರೈಲ್ವೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ರೈಲ್ವೆ ಕಾಯ್ದೆ 160ರ ಪ್ರಕಾರ ಜಾಮೀನುರಹಿತ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಬೈಕ್, ಸೈಕಲ್ ಮತ್ತು ಇತರೆ ವಾಹನ ಸವಾರರು ಲೆವೆಲ್ ಕ್ರಾಸಿಂಗ್ ಮಾಡುವಾಗ ಹೆಚ್ಚಿನ ಜಾಗೃತಿ ವಹಿಸಿ, ರೈಲ್ವೆ ಇಲಾಖೆಯ ಕಾನೂನುಗಳ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಆರ್.ಟಿ.ಓ ಅಧಿಕಾರಿ ಡಿ.ಮೋಹನ್ ಕುಮಾರ್ ಮಾತನಾಡಿ, ತಮ್ಮ ರಕ್ಷಣೆ ಬಗ್ಗೆ ಅರಿವು ಮತ್ತು ಜಾಗರೂಕತೆಯಿಂದ ವರ್ತಿಸಿದಾಗ ಮಾತ್ರ ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಆರ್.ಪಿ ಅಸಿಸ್ಟೆಂಟ್ ಸಬ್ ಇಬ್’ಇನ್‍ಸ್ಪೆಕ್ಟರ್ ಜಾನ್ ಕುರಿಯಕೋಸ್ ಉಪಸ್ಥಿತರಿದ್ದರು.

https://suddikanaja.com/2022/02/16/mp-by-raghavendra-visited-shimoga-and-bhadravathi-railway-over-bridge-and-under-bridge-works-and-instructed-officials/

Leave a Reply

Your email address will not be published. Required fields are marked *

error: Content is protected !!