ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಹೊಳಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಜೂನ್ 18ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?
ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾಮಪಂಚಾಯತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ವೈದ್ಯರು ಹೇಳಿದ್ದೇನು?
ಆಲ್ಕೊಳ ಕೇಂದ್ರ ವ್ಯಾಪ್ತಿಯಲ್ಲೂ ವ್ಯತ್ಯಯ
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾರ್ಗಮುಕ್ತತೆ ನೀಡಬೇಕಾಗಿರುವುದರಿಂದ ಜೂನ್ 18 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಶ್ರೀರಾಂಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್, ಹಾಲದೇವರ ಹೊಸೂರು, ಗುಡ್ಡದ ಹರೆಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋಮಿ ಕಾಲೋನಿ, ತ್ಯಾವರೆಕೊಪ್ಪ, ಸಿಂಹಧಾಮ, ವೀರಗಾರನ ಭೈರನಕೊಪ್ಪ, ಆಲ್ಕೊಳ ಸರ್ಕಲ್, ಎ.ಬಿ.ವಿ.ಪಿ.ಲೇಔಟ್, ಎಸ್.ವಿ.ಬಡಾವಣೆ, ಹರ್ಷ ಫರ್ನ್ ಹೋಟೆಲ್, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.