‘ತೂತು ಮಡಿಕೆ’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್, ಚಿತ್ರದ್ದೇನು ವಿಶೇಷ?

Cinema Madike toothu

 

 

ಸುದ್ದಿ ಕಣಜ.ಕಾಂ | KARNATAKA | CINEMA
ಶಿವಮೊಗ್ಗ: ಚಂದ್ರಕೀರ್ತಿ ನಿರ್ದೇಶನದ ‘ತೂತು ಮಡಿಕೆ’ (Tootu Madike) ಚಲನಚಿತ್ರ ಜುಲೈ 8ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಚಂದ್ರಕೀರ್ತಿ ಹೇಳಿದರು.
ಚಿತ್ರದ‌ಪ್ರಮೋಷನ್ ಗಾಗಿ ಶಿವಮೊಗ್ಗಕ್ಕೆ ಆಗಮಿಸಿ್ ಚಿತ್ರ ತಂಡ ಪತ್ರಿಕಾ‌ಭವನದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಅವರು, ಚಿತ್ರದ ಹಲವು ಸ್ವಾರಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.
ಹೆಸರಿನಲ್ಲೇ‌ ಇದೆ ಸ್ವಾರಸ್ಯ
‘ತೂತು ಮಡಿಕೆ’ಯನ್ನು ಸಾಂಕೇತಿಕತೆವಾಗಿ ಇಟ್ಟುಕೊಂಡು ಅದೇ ಹೆಸರಿನಲ್ಲಿ ಹಾಸ್ಯ ಭರಿತವಾಗಿ ಚಿತ್ರ ನಿರ್ಮಿಸಲಾಗಿದೆ‌.‌ ಇದು ಪಕ್ಕಾ ಎಂಟರ್ ಟೈನ್ಮೆಂಟ್ ಚಿತ್ರವಾಗಿದೆ. ಸಿನಿಮಾ ಕೋವಿಡ್ ಮುನ್ನವೇ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿತ್ತು. ಆದರೆ ಬಿಡುಗಡೆ ಸಾಧ್ಯವಾಗಲಿಲ್ಲ. ಈಗ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ತೂತು ಮಡಿಕೆಗೆ ಎಷ್ಟೇ‌ ನೀರು ಸುರಿದರೂ ಅಷ್ಟೆ!
‘ತೂತು ಮಡಿಕೆ’ಗೆ ಎಷ್ಟು ನೀರು ಹಾಕಿದರೂ ನಿಲ್ಲುವುದಿಲ್ಲ. ಅದರಿಂದ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಬೆಂಗಳೂರಿನ ಲಗ್ಗೆರೆಯ ಸುತ್ತಮುತ್ತ ಇರುವ ಹಾಸ್ಯ ಭರಿತ ಘಟನಾವಳಿಗಳನ್ನೇ ಸೇರಿಸಿ ಸಿನಿಮಾ ಮಾಡಲಾಗಿದೆ ಎಂದರು.
ಈಗಾಗಲೇ‌ ಹಾಡು ಹಾಗೂ ದೃಶ್ಯಾವಳಿಯ ಕೆಲವು ತುಣುಕುಗಳನ್ನು ಆಧರಿಸಿ ಟೀಸರ್ ಬಿಡುಗಡೆ ಮಾಡಲಾಗಿದೆ. ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಿಡುಗಡೆ ಮುನ್ನ ಕಾಲೇಜುಗಳಲ್ಲಿ ಪ್ರಮೋಟ್ ಮಾಡಲಾಗುತ್ತಿದೆ. ಹೀಗಾಗಿ ಸಿನಿಮಾಕ್ಕೂ ಮುಂದಿನ ದಿನಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುವ ಭರವಸೆ ಇದೆ ಎಂದು ತಿಳಿಸಿದರು.
ನಾಯಕ ನಟಿ ಪಾವನಾ ಗೌಡ, ನಿರ್ಮಾಪಕರಾದ ಮಧುಸೂದನ್ ರಾವ್, ಕೆ.ಬಿ.ಶಿವಕುಮಾರ್, ನಟರಾದ ಗಿರೀಶ್ ಶಿವಣ್ಣ, ಉಗ್ರ ಮಂಜು ಇದ್ದರು.

 

Leave a Reply

Your email address will not be published. Required fields are marked *

error: Content is protected !!