ಕಟೀಲ್ ಪೈ ಕಾಲೇಜಿ‌ನಲ್ಲಿ‌ ಹೊಸ ಕೋರ್ಸ್ ಆರಂಭಕ್ಕೆ ಗ್ರೀನ್ ಸಿಗ್ನಲ್

Shivamogga taluk

 

 

ಸುದ್ದಿ‌ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಪದವಿ ಕಾಲೇಜಿಗೆ ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಫಿಲ್ ಪದವಿ ಆರಂಭಿಸಲು ಆರ್‌.ಸಿ.ಐ ಅನುಮತಿ ನೀಡಿದೆ ಎಂದು ಕಾಲೇಜಿನ ನಿರ್ದೇಶಕಿ ಡಾ.ಪ್ರೀತಿ ಪೈ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಗುಣಮಟ್ಟದ ಶಿಕ್ಷಣದ ಮೂಲಕ ಹೆಸರುವಾಸಿಯಾಗಿದೆ. ಹೊಸ ಕೋರ್ಸ್‌’ಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದರು.
ಬಿ.ಎಸ್‌.ಡಬ್ಲ್ಯೂ ಪದವಿಯ ಮೊದಲು ಬ್ಯಾಚ್ ಪರೀಕ್ಷೆಯಲ್ಲಿ ಎ.ಸೌಜನ್ಯ ಪ್ರಥಮ ರ‌್ಯಾಂಕ್ ಹಾಗೂ ಕಳೆದ ಸಾಲಿನ ಸಾಲಿನಲ್ಲಿ ಭೂಮಿಕಾ 5ನೇ ರ‌್ಯಾಂಕ್ ಗಳಿಸಿದ್ದಾರೆ. ಎಂಎಸ್ಸಿ ಕ್ಲಿನಿಕಲ್ ಸೈಕಾಲಜಿಯಲ್ಲಿ 2019-20ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಸ್ವಾತಿ ಪ್ರಥಮ ರ‌್ಯಾಂಕ್ ಕಲಹ ಮೊದಲ 10 ರ್ಯಾಂಕ್‌ಗಳಲ್ಲಿ 5 ರ‌್ಯಾಂಕ್ ಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮಾತನಾಡಿ, ಎಂಎಸ್ಸಿ ಸೈಕಾಲಜಿಯ ಇಬ್ಬರು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ವೆಬಿನಾರ್ ನಲ್ಲಿ ಮಂಡಿಸಿದ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧವೆಂದು ಮನ್ನಣೆ ದೊರೆತಿದೆ. ಬಿಎ ಹಾಗೂ ಬಿಎಸ್‌ಡಬ್ಲೂ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ, ಫೋಟೋಗ್ರಫಿ, ಆಶುಭಾಷಣ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ ಎಂದರು.
ಕಾಲೇಜಿನ ಎಚ್.ಭಾರ್ಗವಿ,‌ ಸಿ.ಡಿ. ರಕ್ಷಿತಾ ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ರಾಜ್ಯಮಟ್ಟದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಂಡಿರುತ್ತಾರೆ. ನಿಮ್ಹಾನ್ಸ್‌ನವರ ಸಹಭಾಗಿತ್ವದಲ್ಲಿ 2022ನೇ ಸಾಲಿನಿಂದ ಮಾನಸಿಕ ಆರೋಗ್ಯ ಹಾಗೂ ಯೋಗ ಎಂಬ ವಿಷಯದಲ್ಲಿ 3 ತಿಂಗಳ ಸರ್ಟಿಫಿಕೇಟ್ ಕೋರ್ಸ್, ರಂಗಾಯಣ, ಶಿವಮೊಗ್ಗದ ಸಹಯೋಗದಲ್ಲಿ ನಾಟಕ ತರಬೇತಿಯ ಸರ್ಟಿಫಿಕೇಟ್ ಕೋರ್ಸ್ ಅನ್ನು ನೀಡಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯದ ಎಂ.ಎಸ್ಸಿ. ಮನಃಶಾಸ್ತ್ರದ ಕೋರ್ಸನ್ನು ಕಾಲೇಜಿನಲ್ಲಿ ಬೋಧಿಸಲಾಗುತ್ತಿದೆ ಎಂದರು.

READ | ಚಾಕ್ಲೆಟ್ ಕೊಡಿಸುವುದಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದನಿಗೆ 20 ವರ್ಷ ಜೈಲು

ಅತ್ಯಾಧುನಿಕ ತಂತ್ರಜ್ಞಾನವನ್ನು ಬೋಧನೆ ಹಾಗೂ ಕಲಿಕೆಗಾಗಿ ಅಳವಡಿಸಿಕೊಳ್ಳಲಾಗುತ್ತದೆ. ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೆ ಅನುಗುಣವಾಗಿ ಬಿ.ಎ (ಮನಃಶಾಸ್ತ್ರ, ಇಂಗ್ಲಿಷ್ ಐಚ್ಚಿಕ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ) ಬಿಎಸ್ಸಿ (ಮನಃಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರ) ಬಿ.ಕಾಂ ಹಾಗೂ ಬಿ.ಎಸ್.ಡಬ್ಲೂ, ಸ್ನಾತಕೋತ್ತರ ಪದವಿಗಳಾದ ಎಂಎಸ್ಸಿ ಕೋರ್ಸ್‌ಗಳಿದ್ದು, ಈ ಕೋರ್ಸುಗಳ ಜೊತೆಗೆ ಅವುಗಳನ್ನು ಓದುವ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಸರ್ಟಿಫಿಕೇಟ್ ಮತ್ತು ಡಿಪ್ಲೊಮ ಕೋರ್ಸುಗಳು ಹಾಗೂ ವಿಶೇಷ ತರಬೇತಿ ಕಾರ್ಯಕ್ರಮಗಳ ಮೂಲಕ ಪದವಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಸಾಮರ್ಥ್ಯ ಒದಗಿಸಲಾಗುತ್ತಿದೆ ಎಂದರು.
ಕಾಲೇಜು ಮಲ್ಲಿಗೇನಹಳ್ಳಿಯ ವಿಶಾಲವಾದ ಆವರಣಕ್ಕೆ ಸ್ಥಳಾಂತರ ಹೊಂದುವ ಕೆಲಸ ಆರಂಭಿಸಿದೆ. ಮೊದಲ ಹಂತದ ಕಟ್ಟಡದ ಕೆಲಸ ಬೇಗನೆ ಮುಗಿಯುವ ನಿರೀಕ್ಷೆ ಇದೆ. ಈ ಆವರಣದ ವಿಸ್ತಾರವು ಒಂದೂವರೆ ಎಕರೆ ಆಗಿರುತ್ತದೆ. ಸಮಗ್ರ ನಕ್ಷೆಯ ಪ್ರಕಾರ ಒಟ್ಟು 5 ಬ್ಲಾಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ಗ್ರಂಥಾಲಯ, ವಿದ್ಯಾರ್ಥಿ ವಸತಿ ಗೃಹ, ಕ್ರೀಡಾ ಸಮುಚ್ಚಯ, ಉಪಹಾರ ಗೃಹ ಇವೆಲ್ಲವನ್ನು ನಿರ್ಮಿಸಲಾಗುತ್ತಿದೆ. ತರಗತಿಗಳಿಗೆ ಐಸಿಟಿ ತಂತ್ರಜ್ಞಾನದ ಎಲ್ಲಾ ಅನುಕೂಲಗಳಿರುತ್ತವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಅಲ್ಲಿಯೇ ತರಗತಿಗಳು ಆರಂಭವಾಗಲಿವೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಮೊ. 9448288483 ಅಥವಾ 9480034495ರಲ್ಲಿ ಸಂಪರ್ಕಿಸಬಹುದು ಎಂದರು. ಮಾಧ್ಯಮಗೋಷ್ಠಿಯಲ್ಲಿ ಡಾ.ರಜನಿ ಎ. ಪೈ., ಡಾ.ರಾಜೇಂದ್ರಚೆನ್ನಿ, ಮೇರಿ ಇವೆಲ್ಯಾನ್, ಡಾ.ನಾಗರಾಜ್ ಉಪಸ್ಥಿತರಿದ್ದರು.

https://suddikanaja.com/2022/06/22/jawaharlal-nehru-national-engineering-college-jnnce-has-launched-a-new-course-in-the-current-academic-year/

Leave a Reply

Your email address will not be published. Required fields are marked *

error: Content is protected !!