ಎನ್.ಎಸ್.ಯು.ಐ ಪ್ರತಿಭಟನೆ

 

 

ಎನ್.ಎಸ್.ಯು.ಐ ಪ್ರತಿಭಟನೆಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಹುರಾಷ್ಟ್ರೀಯ ಕಂಪೆನಿಗಳಿಗೆ ರೆಡ್ ಕಾರ್ಪೆಟ್ ಹಾಸುವ ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿ ಎನ್.ಎಸ್.ಯು.ಐನಿಂದ ಮಂಗಳವಾರ ಪ್ರತಿಭಟನೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಕೇಂದ್ರ ಜಾರಿಗೆ ತಂದಿರುವ ಕಾಯ್ದೆಗಳಿಂದ ಕೃಷಿಕರು ಬೀದಿಗೆ ಬೀಳಲಿದ್ದಾರೆ. ಕಾರ್ಮಿಕರಿಗೆ ಇನ್ನಷ್ಟು ಸಂಕಷ್ಟ ಹೆಚ್ಚಲಿವೆ ಎಂದು ಆರೋಪಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಸಿ.ಜಿ.ಮಧುಸೂದನ್, ಮಹಮ್ಮದ್ ನಿಹಾಲ್, ವಿಜಯ್, ರವಿ, ಸುರೇಶ್, ಕೆ.ಚೇತನ್ ಭಾಗವಹಿಸಿದ್ದರು.

error: Content is protected !!