RRB, SSC, POLICE ಹುದ್ದೆ ನೇಮಕಾತಿಗೆ ಶಿವಮೊಗ್ಗದಲ್ಲಿ ಟ್ರೈನಿಂಗ್

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪೂರ್ವ ತಯಾರಿ (training for competative exams) ಮಾಡುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಇಂತಹ ಅಭ್ಯರ್ಥಿಗಳಿಗೆ ತರಬೇತಿ‌‌‌ ನೀಡಲಿದೆ.
ಯಾವ ಪರೀಕ್ಷೆಗಳಿಗೆ ತರಬೇತಿ?
ಆರ್.ಆರ್.ಬಿ. ಬ್ಯಾಂಕಿಂಗ್, ಎಸ್.ಡಿ.ಎ. ಹಾಗೂ ಪೊಲೀಸ್ ಪೇದೆ ನೇಮಕಾತಿಗಾಗಿ ಪರೀಕ್ಷೆ ಬರೆಯಲು‌ ಉದ್ದೇಶಿಸಿರುವ ಅಭ್ಯರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತರಬೇತಿ ಶಿಬಿರವನ್ನು ಜುಲೈ 25 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, 2ನೇ ಕ್ರಾಸ್, ಗುತ್ಯಪ್ಪ ಕಾಲೋನಿ, ಪಂಪಾನಗರ, ಶಿವಮೊಗ್ಗ ಇಲ್ಲಿ ಉಚಿತವಾಗಿ ಏರ್ಪಡಿಸಲಾಗಿದ್ದು, ಪರೀಕ್ಷಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-255293/ 9108235132/ 9482023412 ಗಳನ್ನು ಸಂಪರ್ಕಿಸುವುದು.

ಓದುಗರೆ ಗಮನಿಸಿ | ದಿಲ್ಲಿಯಲ್ಲೇನಾಗುತ್ತಿದೆ? ರಾಜ್ಯದಲ್ಲೇನಾಗುತ್ತಿದೆ? ಇದಕ್ಕೆಲ್ಲ‌ ಈಗ ನಿಮ್ಮಲ್ಲಿ‌ ಉತ್ತರವಿದೆ. ಆದರೆ, ನಿಮ್ಮೂರು, ನಿಮ್ಮ ಗಲ್ಲಿಯ‌ ಸುದ್ದಿಯೇ‌ ಹಲವು‌ ಸಲ‌ ತಿಳಿಯದು. ಅದನ್ನು ನಾವು ನಿಮಗೆ ತಿಳಿಸುತ್ತೇವೆ. ನಿಮ್ಮ‌ ಮೊಬೈಲಿಗೆ ಪಕ್ಕಾ‌, ನೇರ ಸುದ್ದಿಗಳು‌ ತಲುಪಿಸಲಿದೆ ಸುದ್ದಿ ಕಣಜ ತಂಡ. ಅದಕ್ಕಾಗಿ, ನಮ್ಮ ಟೆಲಿಗ್ರಾಂ ಹಾಗೂ ವಾಟ್ಸಾಪ್ ಗ್ರೂಪ್ ಸೇರಿ. (ಸಂಪಾದಕರು, ಸುದ್ದಿ ಕಣಜ.ಕಾಂ)

 

Leave a Reply

Your email address will not be published. Required fields are marked *

error: Content is protected !!