ರಾತ್ರಿ ಸುರಿದ ಮಳೆಯಿಂದ ಭದ್ರಾ ಜಲಾಶಯ ಒಳಹರಿವಿನಲ್ಲಿ ಏರಿಕೆ, ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?

Linganamakki dam

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಬುಧವಾರ ರಾತ್ರಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಒಂದೆಡೆಯಾದರೆ ಜಲಾಶಯಗಳ ಒಳಹರಿವಿನಲ್ಲೂ ತುಸು ಏರಿಕೆ ಕಂಡುಬಂದಿದೆ.
ಜುಲೈ 27ರಂದು ಭದ್ರಾ ಜಲಾಶಯದಲ್ಲಿ 186 ಅಡಿ ನೀರಿದ್ದರೆ, 9355 ಕ್ಯೂಸೆಕ್ಸ್ ಒಳಹರಿವಿತ್ತು. ಲಿಂಗನಮಕ್ಕಿಯಲ್ಲಿ 1798.30 ಅಡಿ ನೀರಿದ್ದು, 6615.94 ಕ್ಯೂಸೆಕ್ಸ್ ಒಳಹರಿವಿತ್ತು. ಜುಲೈ 28ರಂದು ನೀರಿನ ಮಟ್ಟ ಭದ್ರಾದಲ್ಲಿ 184.1 ಅಡಿ, ಲಿಂಗನಮಕ್ಕಿಯಲ್ಲಿ 1798.35 ಅಡಿ ಇದ್ದು, ಒಳಹರಿವು ಭದ್ರೆಯಲ್ಲಿ 12358 ಕ್ಯೂಸೆಕ್ಸ್, ಲಿಂಗನಮಕ್ಕಿಯಲ್ಲಿ 7872 ಕ್ಯೂಸೆಕ್ಸ್ ಹರಿವಿದೆ.

READ | ಹಂದಿ‌ ಅಣ್ಣಿ ಕೊಲೆಗೈದ ಆರೋಪಿಗಳಿಗೆ ನ್ಯಾಯಾಂಗ ಬಂಧನ 

ಎಲ್ಲೆಲ್ಲಿ ನುಗ್ಗಿದೆ ನೀರು?
ನಗರ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ನೀರು ನುಗ್ಗಿದೆ. ಚಿಕ್ಕಲ್ ಬಡಾವಣೆಯ ಮೂರನೇ ಕ್ರಾಸ್, ಸಿದ್ದೇಶ್ವರ ನಗರದ ಮನೆಗಳಿಗೆ ನೀರು ನುಗ್ಗಿದೆ. ರವೀಂದ್ರನಗರದ ರಸ್ತೆಗಳ ಮೇಲೆಯೂ ನೀರು ನಿಂತಿತ್ತು. ನಿದಿಗೆ ಗ್ರಾಮ ಪಂಚಾಯಿತಿಯ ಮಾರಿಯಮ್ಮ ಕಾಲೋನಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಪಾರ್ವತಮ್ಮ ಎಂಬುವವರ ಮನೆ ಕುಸಿದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

https://suddikanaja.com/2021/09/08/flood-loss-in-shivamogga/

Leave a Reply

Your email address will not be published. Required fields are marked *

error: Content is protected !!