ಸುದ್ದಿ ಕಣಜ.ಕಾಂ | DISTRICT | COTPA
ಶಿವಮೊಗ್ಗ: ನಗರದ ದುರ್ಗಿಗುಡಿಯಲ್ಲಿ ಕೊಟ್ಪಾ ಕಾಯ್ದೆ (Cigarettes and Other Tobacco Products Act- COTPA Act) ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಶನಿವಾರ ದಿಢೀರ್ ದಾಳಿ ನಡೆಸಲಾಯಿತು.
ಶಿವಮೊಗ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ದಾಳಿ ನಡೆಸಿ ಒಟ್ಟು 21 ಪ್ರಕರಣಗಳನ್ನು ದಾಖಲಿಸಿ, ₹3300 ದಂಡ ಸಂಗ್ರಹಿಸಲಾಯಿತು.
READ | ಬಾಲ್ಯ ವಿವಾಹಕ್ಕೆ ಸಹಕರಿಸಿದ ಪ್ರಿಂಟರ್, ಪೂಜಾರಿ ಆದಿಯಾಗಿ ಎಲ್ಲರ ಮೇಲೂ ಬೀಳಲಿದೆ ಕೇಸ್
ತಂಬಾಕು ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುವ ತಂಬಾಕು ಮಾರಾಟಗಾರರಿಗೆ ಕಾಯ್ದೆ ಕುರಿತು ಅರಿವು ಮೂಡಿಸಿ, ತಿಳಿವಳಿಕೆ ನೋಟಿಸ್ ಅನ್ನು ಜಾರಿ ಮಾಡಲಾಯಿತು. ತಂಬಾಕು ಜಾಹೀರಾತು ಫಲಕವನ್ನು ತೆರವುಗೊಳಿಸಲಾಯಿತು.
ಈ ವೇಳೆ ಶಿವಮೊಗ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತರಾಜ್ ಅರಸ್, ಸಮಾಜ ಕಾರ್ಯಕರ್ತ ರವಿರಾಜ್, ಪೊಲೀಸ್ ಇಲಾಖೆ ಸಿಬ್ಬಂದಿ ಹಾಜರಿದ್ದರು.
https://suddikanaja.com/2022/07/26/rain-on-shops-mear-school-and-colleges/