Section 144 | ನಿಷೇಧಾಜ್ಞೆ ಭವಿಷ್ಯ ಇಂದು ನಿರ್ಧಾರ

DC Office

 

 

ಸುದ್ದಿ ಕಣಜ.ಕಾಂ | 18 AUG 2022 | DISTRICT
ಶಿವಮೊಗ್ಗ: ವೀರ ಸಾವರ್ಕರ್ ಅವರ ಫ್ಲೆಕ್ಸ್ ತೆರವುಗೊಳಿಸಿದ ವಿಚಾರವಾಗಿ ನಗರದಲ್ಲಿ ನಡೆದ ಗಲಾಟೆ ಹಿನ್ನೆಲೆ ಜಿಲ್ಲಾಡಳಿತ ಕಲಂ 144 ಅನ್ವಯ ನಿಷೇಧಾಜ್ಞೆಯನ್ನು ವಿಧಿಸಿತ್ತು. ಆ ಆದೇಶದಂತೆ, ಆಗಸ್ಟ್ 15ರ ಮಧ್ಯಾಹ್ನದಿಂದ ಆಗಸ್ಟ್ 18ರ ರಾತ್ರಿ 10ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

READ | ಕೋಮುಗಲಭೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿಗೆ ಸಿದ್ಧ

ಇಂದು ನಿರ್ಧಾರ
ನಿಷೇಧಾಜ್ಞೆಯನ್ನು ಮುಂದುವರಿಸಬೇಕೋ‌ ಅಥವಾ ರದ್ದುಪಡಿಸಬೇಕೋ‌ ಎಂಬ ವಿಚಾರ ಆಗಸ್ಟ್ 18ರಂದು ನಿರ್ಧರಿಸಲಾಗುವುದು. ನಗರದ ಸ್ಥಿತಿಯನ್ನು ಅವಲೋಕಿ ಈ‌ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಈಗಾಗಲೇ ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿರಿವಂತೆ, ಮುಂದುವರಿಸುವ ಸಾಧ್ಯತೆ ಇದೆ. ಆದರೂ ಭದ್ರತೆ ಸೇರಿದಂತೆ ನಾನಾ ವಿಚಾರಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು, ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!