DC Shadowing | ಶಿವಮೊಗ್ಗದಲ್ಲಿ ಡಿಸಿಯೊಂದಿಗೆ ಒಂದು ದಿ‌‌ನ ವಿಶಿಷ್ಟ ಕಾರ್ಯಕ್ರಮ, ಏನಿದರ ವಿಶೇಷ?

Shivamogga DC

 

 

  • ಕರ್ನಾಟಕ ಕೌಶಲ ಅಭಿವೃದ್ದಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎನ್.ಹಂಸಿಣಿ ಜಿಲ್ಲೆಗೆ ಪ್ರಥಮ 
  • ‘ಕೌಶಲ ಸ್ಫೂರ್ತಿ’ ಶೀರ್ಷಿಕೆ ಅಡಿಯಲ್ಲಿ ‘ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ

ಸುದ್ದಿ ಕಣಜ.ಕಾಂ‌ | DISTRICT | 27 AUG 2022
ಶಿವಮೊಗ್ಗ: ವಿಶ್ವ ಯುವ ಕೌಶಲ ದಿನಾಚರಣೆ ಅಂಗವಾಗಿ ಕೌಶಲ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಲ್ಲಿರುವ ಕರ್ನಾಟಕ ಕೌಶಲ ಅಭಿವೃದ್ದಿ ನಿಗಮದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎನ್.ಹಂಸಿಣಿ ಅವರು ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ವಿಜೇತರಾಗಿರುತ್ತಾರೆ.

READ | ಗಣೇಶ ಮೆರವಣಿಗೆಯಲ್ಲಿ ಅನ್ಯಕೋಮಿನವರ ವಿರುದ್ಧ ಘೋಷಣೆ ಕೂಗಿದರೆ FIR ದಾಖಲು

ಇವರಿಗೆ  ‘ಕೌಶಲ ಸ್ಫೂರ್ತಿ’ ಶೀರ್ಷಿಕೆ ಅಡಿಯಲ್ಲಿ ‘ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ’ (ಡಿಸ್ಟ್ರಿಕ್ಟ್ ಕಲೆಕ್ಟರ್ ಶ್ಯಾಡೊಯಿಂಗ್) ಕಾರ್ಯಕ್ರಮವನ್ನು ಆ.25 ರಂದು ಏರ್ಪಡಿಸಲಾಗಿದ್ದು ಎನ್.ಹಂಸಿಣಿ ಇವರು ಜಿಲ್ಲಾಧಿಕಾರಿಗಳೊಂದಿಗೆ ಅವರ ದಿನದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಅವರ ಅಧ್ಯಕ್ಷತೆಯಲ್ಲಿ ನಡೆದ ಹಲವು ಸಭೆಗಳಲ್ಲಿ ಪಾಲ್ಗೊಂಡು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಗಮನಿಸಿರುತ್ತಾರೆ.
ನನ್ನ ಪಾಲಿನ ಸುವರ್ಣ ದಿನ
ಈ ಕುರಿತು ಪ್ರತಿಕ್ರಿಯೆ ನೀಡಿದ ಹಂಸಿಣಿ, ‘ಈ ಕಾರ್ಯಕ್ರಮದಿಂದಾಗಿ ಅನೇಕ ಹೊಸ ವಿಷಯಗಳನ್ನು ಕಲಿಯಲು ಅವಕಾಶ ದೊರೆಯಿತು. ಅಲ್ಲದೇ ಯಾವುದೇ ಕಾರ್ಯದಲ್ಲಿ ಯಶಸ್ವಿಯಾಗಲು ಕೌಶಲ ಬಹಳ ಮುಖ್ಯ ಎಂದು ತಿಳಿಯಿತು. ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ಕೌಶಲಾಭಿವೃದ್ಧಿ ನಿಗಮಕ್ಕೆ ಧನ್ಯವಾದ ತಿಳಿಸುತ್ತೇನೆ. ಇಂದು ನನ್ನ ಪಾಲಿನ ಸುವರ್ಣ ದಿನ. ಜಿಲ್ಲಾಧಿಕಾರಿಗಳ ದಿನಚರಿ ಹೇಗಿರುತ್ತದೆ ಎಂಬುದನ್ನು ಹತ್ತಿರದಿಂದ ನೋಡಲು ಸಾಧ್ಯವಾಯಿತು. ಅವರ ಕೆಲಸದ ಒತ್ತಡ ಎಷ್ಟಿರುತ್ತದೆ ಎಂದು ಹತ್ತಿರದಿಂದ ನೋಡಿದ ಮೇಲೆ ಅರಿವಾಯಿತು ಎಂದ ಅವರು ನಾನೂ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ ಉಪಸ್ಥಿತರಿದ್ದರು.

https://suddikanaja.com/2020/12/19/lok-adalat-order-states-highest-accident-compensation-in-shivamogga/

Leave a Reply

Your email address will not be published. Required fields are marked *

error: Content is protected !!