Shivamogga rain | ಶಿವಮೊಗ್ಗದಲ್ಲಿ ಅನಾಹುತ ಸೃಷ್ಟಿಸಿದ ಮಳೆ, ಮನೆಗಳಿಗೆ ನುಗ್ಗಿದ ನೀರು, ಎಲ್ಲೆಲ್ಲಿ ಸಮಸ್ಯೆ?

RAIN Hosamane

 

 

  • ಹೊಸಮನೆಯ ಹಲವು ಮನೆಗಳಿಗೆ ನುಗ್ಗಿದ ನೀರು
  • ಚೋರಡಿ ಗ್ರಾಮದಲ್ಲೂ ವರುಣನ ಆರ್ಭಟ
  • ಶಿವಮೊಗ್ಗದಲ್ಲಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು

ಸುದ್ದಿ ಕಣಜ.ಕಾಂ | DISTRICT | 06 SEP 2022
ಶಿವಮೊಗ್ಗ: ಜಿಲ್ಲೆಯ ಹಲವೆಡೆ ವರ್ಷಧಾರೆಯಾಗುತ್ತಿದೆ. ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮಳೆಯು ಭಾರಿ ಅನಾಹುತ ಸೃಷ್ಟಿಸಿದೆ.
ಹೊಸಮನೆ ರಾಜಕಾಲುವೆ ಪಕ್ಕ ಚೌಡೇಶ್ವರಿ ಕಾಲೋನಿಯಲ್ಲಿ ರಸ್ತೆಯ ಮೇಲೆಲ್ಲ ನೀರು ಹರಿಯುತ್ತಿದ್ದು, ಸುಮಾರು 150ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿವೆ ಎಂದು ತಿಳಿದುಬಂದಿದೆ.

READ | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾರ್ಗ ಪ್ರಕಟ, ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಎನ್.ಟಿ.ರಸ್ತೆ‌ ಜಲಾವೃತ
ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಎನ್.ಟಿ.ರಸ್ತೆಯು ಜಲಾವೃತಗೊಂಡಿದೆ. ಚರಂಡಿಯಿಂದ ನೀರು ಹರಿದುಹೋಗಲು ಸಾಧ್ಯವಾಗದೇ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ಜನರು ಒಂದು ಬದಿಯಿಂದ ಮತ್ತೊಂದೆಡೆ ಹೋಗುವುದಕ್ಕೂ ಕಷ್ಟಡಪಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಚೋರಡಿಯಲ್ಲೂ ವರುಣನ ಆರ್ಭಟ
ಚೋರಡಿಯಲ್ಲೂ ವರುಣನ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ. ಬೆಂಗಳೂರು-ಹೊನ್ನಾವರ ಹೆದ್ದಾರಿ ನೀರಿನಿಂದ ಆವೃತ್ತವಾಗಿದೆ. ಗ್ರಾಮದೊಳಗೂ ನೀರು ನುಗ್ಗಿ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ.

https://suddikanaja.com/2021/06/20/rain-effect-in-many-places-of-malenadu/

Leave a Reply

Your email address will not be published. Required fields are marked *

error: Content is protected !!