Shivamogga Dasara | ಶಿವಮೊಗ್ಗದಲ್ಲಿ ದಸರಾ ಕ್ರೀಡಾಕೂಟಕ್ಕೆ ಬಿ.ವೈ.ರಾಘವೇಂದ್ರ ಚಾಲನೆ

Dasara sports

 

 

HIGHLIGHTS

• ರಾಜ್ಯದಲ್ಲಿ ಮೈಸೂರು ಬಿಟ್ಟರೆ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಜಿಲ್ಲೆ ಶಿವಮೊಗ್ಗ
• ಸಂಸದ ಬಿ.ವೈ.ರಾಘವೇಂದ್ರ ಅವರು ಧ್ವಜಾರೋಹ, ಕ್ರೀಡಾಕೂಟಕ್ಕೆ ಗುಂಡೆಸೆಯುವ ಮೂಲಕ ಚಾಲನೆ


ಸುದ್ದಿ ಕಣಜ.ಕಾಂ | DISTRICT | 15 SEP 2022
ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 2022-23 ನೇ ಸಾಲಿನ ಶಿವಮೊಗ್ಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಧ್ವಜಾರೋಹಣ ಹಾಗೂ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

ನಮ್ಮ ನಾಡೇ ಸಂಭ್ರಮಿಸುವ ದಸರಾ ಪ್ರಯುಕ್ತ ಜಿಲ್ಲೆಯಲ್ಲಿ ಹಲವಾರು ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರೆ ಚಟುವಟಿಕೆಗಳು ಜರುಗುತ್ತವೆ. ಪಾಲಿಕೆ ವತಿಯಿಂದ ಸಹ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡೆ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. 10 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿದ್ದು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಸುನೀತಾ ಅಣ್ಣಪ್ಪ, ಮೇಯರ್, ಮಹಾನಗರ ಪಾಲಿಕೆ

ಆರೋಗ್ಯಯುತವಾದ ದೇಹದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಕ್ರೀಡೆಯಿಂದ ಇವೆರಡನ್ನೂ ಹೊಂದಬಹುದಾಗಿದ್ದು, ಎಲ್ಲರೂ ಉತ್ಸಾಹದಿಂದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಬಿ.ವೈ.ರಾಘವೇಂದ್ರ ಕರೆ ನೀಡಿದರು.

READ | ಶಿವಮೊಗ್ಗದಲ್ಲಿ ಉದ್ಯೋಗ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ವಯಸ್ಸಿನ ಇತಿಮಿತಿ ಇಲ್ಲ. ಮನಸ್ಸು ಉಲ್ಲಸಿತವಾಗಿ, ಸಂತಸದಿಂದಿರಲು ಕ್ರೀಡೆ ಸಹಕಾರಿ. ಆದ್ದರಿಂದ ಎಲ್ಲರೂ ನಾಡಹಬ್ಬ ದಸರಾ ಪ್ರಯುಕ್ತ ಹಮ್ಮಿಕೊಂಡಿರುವ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ನಮ್ಮ  ಸಂಸ್ಕೃತಿಯನ್ನು ಬಿಂಬಿಸುವಂತಹ ವಿವಿಧ ಕಾರ್ಯಕ್ರಮಗಳು ನವರಾತ್ರಿಯ ಒಂಭತ್ತು ದಿನಗಳು ನಡೆಯುತ್ತವೆ. ಈ ಬಾರಿ ಮೈಸೂರು ದಸರಾ ಉತ್ಸವವನ್ನು ನಮ್ಮ ರಾಷ್ಟ್ರಪತಿಗಳು ಉದ್ಘಾಟಿಸುವುದು ವಿಶೇಷವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರು ಬಿಟ್ಟರೆ ಅದ್ದೂರಿಯಾಗಿ ದಸರಾ ಆಚರಣೆ ಮಾಡುವ ಎರಡನೇ ಜಿಲ್ಲೆ ಶಿವಮೊಗ್ಗ. ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ನವರಾತ್ರಿ ವೇಳೆ ವಿವಿಧ ಸಾಂಸ್ಕೃತಿಕ , ಕ್ರೀಡೆ ಸೇರಿದಂತೆ ಚಟುವಟಿಕೆಗಳು ನಡೆಯಲಿದ್ದು, ನಗರದ ದೇವರುಗಳೆಲ್ಲ ಒಂದೆಡೆ ಸೇರಿ ವಿಜೃಂಭಣೆಯಿಂದ ಬನ್ನಿ ಮುಡಿಯುವ ಕಾರ್ಯ ಜರುಗಲಿದೆ. ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಜಂಗಲ್ ರೆಸಾರ್ಟ್ ನಿರ್ದೇಶಕ ರಾಜೇಶ್ ಕಾಮತ್, ಸಿಮ್ಸ್ ಆಡಳಿತ ಮಂಡಳಿ ನಿರ್ದೇಶಕ ದಿವಾಕರ್ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ವೀರಭದ್ರಪ್ಪ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಇತರರು ಪಾಲ್ಗೊಂಡಿದ್ದರು.

https://suddikanaja.com/2021/09/01/appemidi-mango-postal-card/

Leave a Reply

Your email address will not be published. Required fields are marked *

error: Content is protected !!